HomeLatest NewsBIG NEWS: ಕಾಂಗ್ರೆಸ್ ನಲ್ಲಿ ತೀವ್ರಗೊಂಡ ಆಂತರಿಕ ಸಂಘರ್ಷ: ಸಿದ್ದರಾಮಯ್ಯ ಕಡೆಯವರನ್ನು ಡಿಕೆಶಿ ಹುಡುಕಿ ಹುಡುಕಿ...

BIG NEWS: ಕಾಂಗ್ರೆಸ್ ನಲ್ಲಿ ತೀವ್ರಗೊಂಡ ಆಂತರಿಕ ಸಂಘರ್ಷ: ಸಿದ್ದರಾಮಯ್ಯ ಕಡೆಯವರನ್ನು ಡಿಕೆಶಿ ಹುಡುಕಿ ಹುಡುಕಿ ಹೊಡೆಯುತ್ತಿದ್ದಾರೆ: ಆರ್.ಅಶೋಕ್ ವ್ಯಂಗ್ಯ

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಬಣಗಳ ನಡುವೆ ಆಂತರಿಕ ಸಂಘರ್ಷ ತೀವ್ರಗೊಂಡಿದೆ. ಸಿದ್ದರಾಮಯ್ಯ ಸಣ್ಣ ಸಣ್ಣ ಇಲಿಗಳನ್ನು ಹೊಡೆಯುತ್ತಿದ್ದರೆ, ಡಿ.ಕೆ ಶಿವಕುಮಾರ್ ದೊಡ್ಡ ದೊಡ್ಡ ಹುಲಿಗಳನ್ನು ಹೊಡೆಯುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.

ಬೆಂಗಳೂರುನಲ್ಲಿ ಸುದ್ದಿಗೋಷ್ಠಿ ನಡೆಸಿದ ಆರ್.ಅಶೋಕ್, ಸಿಎಂ ಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ. ಅವರ ಜೊತೆಯಲ್ಲಿದ್ದ ಎಲ್ಲರನ್ನೂ ಟಾರ್ಗೆಟ್ ಮಾಡಲಾಗುತ್ತಿದೆ. ನಾಗೇಂದ್ರ ಸಿದ್ದರಾಮಯ್ಯ ಅವರ ಜೊತೆಗಿದ್ದರು. ಅವರೂ ಮನೆಗೆ ಹೋದರು. ರಾಜಣ್ಣ ಸಿದ್ದರಾಮಯ್ಯ ಅವರ ಪರಮಾಪ್ತರು. ಅವರೂ ಮನೆಗೆ ಹೋದರು. ಈಗ ಜಮೀರ್ ಅಹ್ಮದ್ ಸರದಿ ಬಂದಿದೆ. ಅವರನ್ನು ಮನೆಗೆ ಕಳುಹಿಸಲು ಎಲ್ಲಾ ರೀತಿಯ ಪ್ಲಾನ್ ಮಾಡುತ್ತಿದ್ದಾರೆ. ದಾವಣಗೆರೆ ಜಬ್ಬಾರ್ ಅವರಿಗೆ ಗೇಟ್ ಪಾಸ್ ಕೊಡಲಾಗಿದೆ. ಇವರೆಲ್ಲರೂ ಸಿದ್ದರಾಮಯ್ಯ ಅವರ ಬೆಂಬಲಿಗರು. ಎಲ್ಲರನ್ನೂ ಮನೆಗೆ ಕಳುಹಿಸಲಾಗಾಗಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕ್ಯಾಬಿನೆಟ್‌ನಿಂದ ತೆಗೆದುಹಾಕಲ್ಪಟ್ಟ ರಾಜಣ್ಣ, ನಾಗೇಂದ್ರ, ಮತ್ತು ಜಮೀರ್‌ರಂತಹ ಸಿದ್ದರಾಮಯ್ಯ ಬೆಂಬಲಿಗರನ್ನು ವ್ಯವಸ್ಥಿತವಾಗಿ ಪಕ್ಷದಿಂದ ದೂರ ಮಾಡಲಾಗುತ್ತಿದೆ. ದಾವಣಗೆರೆಯ ಜಬ್ಬಾರ್ ಮತ್ತು ಸಿಎಂ ಕಾರ್ಯದರ್ಶಿಯಾಗಿದ್ದ ನಜೀರ್‌ರನ್ನು ಸಹ ಗೇಟ್ ಪಾಸ್ ನೀಡಿ ಹೊರಹಾಕಲಾಗಿದೆ. ಈ ಹಿಂದೆ ಗೊವಿಂದರಾಜ್ ಅವರನ್ನೂ ಮನೆಗೆ ಕಳುಹಿಸಿದ್ದಾರೆ. ಸಿದರಾಮಯ್ಯ ಅವರ ಬೆಂಬಲಿಗರನ್ನು ಹುಡುಕಿ ಹುಡುಕಿ ಹೊಡೆಯುವ ಕೆಲಸವನ್ನು ಡಿ.ಕೆ.ಶಿವಕುಮಾರ್ ಮಾಡುತ್ತಿದ್ದಾರೆ. ಹೊಡಿ ಮಗ ಹೊಡಿ ಮಗ ಬಿಡ ಬೇಡ ಅವ್ನಾ…. ಅಂತಾ ಒಬ್ಬೊಬ್ಬರನ್ನೂ ಟಾರ್ಗೆಟ್ ಮಾಡಿ ಹುಡುಕಿ ಹೊಡೆಯುತ್ತಿದ್ದಾರೆ. ಯಶಸ್ವಿಯೂ ಆಗುತ್ತಿದ್ದಾರೆ.

ಒಟ್ಟಾರೆ ಸಿದ್ದರಾಮಯ್ಯ ಬೆಂಬಲಿಗರಿಗೆ ಕಾಂಗ್ರೆಸ್‌ನಲ್ಲಿ ಉಳಿಗಾಲವಿಲ್ಲ. ಒಟ್ಟಾರೆ ಕಾಂಗ್ರೆಸ್ ಪಕ್ಷವು ನಾಯಕತ್ವವಿಲ್ಲದೆ ಬೀದಿ ಭಿಕಾರಿಯಾಗಿದೆ ಎಂದು ಅವರು ಟೀಕಿಸಿದ್ದಾರೆ.

ಸಿದ್ದರಾಮಯ್ಯ ಅವರನ್ನೂ ಕಳುಹಿಸಲು ಬಲೆ ಹೆಣೆದಿದ್ದಾರೆ. ಆದರೆ ಸಿದ್ದರಾಮಯ್ಯ ಬಲೆಗೆ ಬೀಳುತ್ತಿಲ್ಲ ಅಷ್ಟೇ. ಬಲೆಗೆ ಬಿದ್ದರೆ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ ಎಂದರು.

ಸಿದ್ದರಾಮಯ್ಯ ಸಣ್ಣ ಸಣ್ಣ ಇಲಿಗಳನ್ನು ಹಿಡಿಯುತ್ತಿದ್ದಾರೆ. ಡಿ.ಕೆ ದೊಡ್ಡ ದೊಡ್ಡ ಹುಲಿಗಳನ್ನೇ ಹೊಡೆಯುತ್ತಿದ್ದಾರೆ. ರಾಜಣ್ಣ, ಜಮೀರ್ ಇವರೆಲ್ಲ ಸಣ್ಣವರಾ? ಗೋವಿಂದರಾಜ್, ಜಬ್ಬರ್ ಇವರೆಲ್ಲ ಸಣ್ಣವರಾ? ಇಂತಹ ದೊಡ ದೊದ್ಡವರನ್ನೇ ಹೊರಡಿಯುತ್ತಿದ್ದಾರೆ ಎಂದು ಕಿಡಿಕಾರಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular