HomeKarnatakaBIG NEWS: ಎಸ್.ಟಿ.ಸೋಮಶೇಖರ್ ಕರೆತಂದಿದ್ದು ನಾನೇ ಆದ್ರೆ ಜಾಮೂನು ಕೊಟ್ಟಿಲ್ಲ ಎಂದ ಆರ್.ಅಶೋಕ್

BIG NEWS: ಎಸ್.ಟಿ.ಸೋಮಶೇಖರ್ ಕರೆತಂದಿದ್ದು ನಾನೇ ಆದ್ರೆ ಜಾಮೂನು ಕೊಟ್ಟಿಲ್ಲ ಎಂದ ಆರ್.ಅಶೋಕ್

ಬೆಂಗಳೂರು: ಬಿಜೆಪಿಯವರು ಪಕ್ಷಕ್ಕೆ ಕರೆತರುವಾಗ ಜಾಮೂನು ಕೊಡ್ತಾರೆ. ಬಳಿಕ ಅಧಿಕಾರ ಹೋದ ಮೇಲೆ ವಿಷ ಕೊಡ್ತಾರೆ ಎಂಬ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ಮಾಜಿ ಸಚಿವ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಸೋಮಶೇಖರ್ ಗೆ ನಾನು ಜಾಮೂನು ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಎಸ್.ಟಿ.ಸೋಮಶೇಖರ್ ಅವರನ್ನು ಅಂದು ಕರೆತಂದಿದ್ದು ನಾನೇ. ಆದರೆ ಅವರಿಗೆ ಜಾಮೂನು ಕೊಟ್ಟಿಲ್ಲ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಂದು ಅಯ್ಯಪ್ಪ ದೇಗುಲಕ್ಕೆ ಕರೆದೊಯ್ದು ಪ್ರಸಾದ ಕೊಟ್ಟಿದ್ದೆ ಅಷ್ಟೇ. ನಾನಂತು ಅವರಿಗೆ ಜಾಮೂನು ಕೊಟ್ಟಿಲ್ಲ ಎಂದು ತಿಳಿಸಿದ್ದಾರೆ.

ಬಿಜೆಪಿ ಮುಖಂಡರೇ ಸೋಮಶೇಖರ್ ಪಕ್ಷದಿಂದ ಹೋದರೆ ಹೋಗಲಿ ಎಂದು ಮಾತನಾಡುತ್ತಿದ್ದಾರೆ. ಅವರೇ ನನ್ನನ್ನು ಕಳುಹಿಸಲು ರೆಡಿಯಾಗಿದ್ದಾರೆ. ಬಿಜೆಪಿಯವರು ಪಕ್ಷಕ್ಕೆ ಕರೆತರುವಾಗ ಜಾಮೂನು ಕೊಡ್ತಾರೆ ಬಳಿಕ ಅಧಿಕಾರ ಹೋದ ಮೇಲೆ ವಿಷ ಕೊಡ್ತಾರೆ ಎಂದು ಸ್ವಪಕ್ಷದ ವಿರುದ್ಧವೇ ಎಸ್.ಟಿ.ಸೋಮಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದರು.

 

For Latest News Updates, Join Our Whatsapp Community🚩
RELATED ARTICLES

Most Popular