HomeKarnatakaBIG NEWS: ಆರೋಗ್ಯ ಇಲಾಖೆ ಅನಾರೋಗ್ಯ ಇಲಾಖೆಯಾಗಿದೆ: ಕಳಪೆ ಐವಿ ಡ್ರಾಪ್ ನಿಂದ ಬಾಣಂತಿಯರು ಸಾವನ್ನಪ್ಪುತ್ತಿದ್ದಾರೆ:...

BIG NEWS: ಆರೋಗ್ಯ ಇಲಾಖೆ ಅನಾರೋಗ್ಯ ಇಲಾಖೆಯಾಗಿದೆ: ಕಳಪೆ ಐವಿ ಡ್ರಾಪ್ ನಿಂದ ಬಾಣಂತಿಯರು ಸಾವನ್ನಪ್ಪುತ್ತಿದ್ದಾರೆ: ಆರ್. ಅಶೋಕ್ ಆಕ್ರೋಶ

ಬೆಂಗಳೂರು: ಬಳ್ಳಾರಿ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್.ಅಶೊಕ್ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್.ಅಶೊಕ್, ಬಿಮ್ಸ್ ನಲ್ಲಿ ಕಳಪೆ ಐವಿ ಡ್ರಾಪ್ ನಿಂದ ಬಾಣಂತಿಯರು ಸಾವನ್ನಪ್ಪುತ್ತಿದ್ದಾರೆ. ಆರೋಗ್ಯ ಇಲಾಖೆ ಅನಾರೋಗ್ಯ ಇಲಾಖೆ ಆಗಿದೆ. ಐವಿ ಡ್ರಾಪ್ ಕಳಪೆ ಎಂದು ಗೊತ್ತಾದ ಮೇಲೂ ಇಂದು ಮತ್ತೊಂದು ಸಾವು ಸಂಭವಿಸಿದೆ. ಇಷ್ಟೆಲ್ಲ ಆದರೂ ಆರೋಗ್ಯ ಸಚಿವರು, ಸರ್ಕಾರ ಯಾವ ಕ್ರಮ ಕೈಗೊಂಡಿದೆ? ಎಂದು ಪ್ರಶ್ನಿಸಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ನಡೆದ ಘಟನೆ ಬಗ್ಗೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅತ್ತಿದ್ದೇ ಅತ್ತಿದ್ದು. ರಾಹುಲ್ ಗಾಂಧಿ ಸೇರಿ ಎಲ್ಲರೂ ಟವಲ್ ತಗೊಂಡು ಒರೆಸಿಕೊಂಡಿದ್ರು. ಕಣ್ಣೀರು ಬರದಿದ್ದರು ಒರೆಸಿಕೊಳ್ಳುತ್ತಿದ್ದರು. ಈಗ ಬಾಣಂತಿಯರು ಸಾವನ್ನಪ್ಪಿದ್ದಾರೆ. ಬಾಣಂತಿಯರು ಮೃತಪಟ್ಟಾಗ ಕಣ್ಣೀರು ಬರಲಿಲ್ವಾ? ಒಂದು ಸಿಂಗಲ್ ಡ್ರಾಪ್ ಕಣ್ಣೀರು ಬರೋದು ಬೇಡ್ವಾ? ಎಂದು ಕಿಡಿಕಾರಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

 

For Latest News Updates, Join Our Whatsapp Community🚩
RELATED ARTICLES

Most Popular