HomeLatest NewsGOOD NEWS : 'ನಮ್ಮ ಮೆಟ್ರೋ' ನಿಲ್ದಾಣದಲ್ಲಿ 'QR ಟಿಕೆಟ್' ಯಂತ್ರಗಳ ವ್ಯವಸ್ಥೆ : ಇನ್ಮುಂದೆ...

GOOD NEWS : ‘ನಮ್ಮ ಮೆಟ್ರೋ’ ನಿಲ್ದಾಣದಲ್ಲಿ ‘QR ಟಿಕೆಟ್’ ಯಂತ್ರಗಳ ವ್ಯವಸ್ಥೆ : ಇನ್ಮುಂದೆ ಜಸ್ಟ್ 30 ಸೆಕೆಂಡ್ ಒಳಗೆ ಟಿಕೆಟ್ ಸಿಗುತ್ತೆ.!

ಬೆಂಗಳೂರು : ಪ್ರಯಾಣಿಕರ ಅನುಭವವನ್ನು ಇನ್ನಷ್ಟು ಉತ್ತಮಪಡಿಸಲು ಮತ್ತು ಡಿಜಿಟಲ್ ನವೀನತೆಗಳನ್ನು ಅಳವಡಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಬದ್ಧವಾಗಿದೆ. ಈ ಪ್ರಯತ್ನದ ಭಾಗವಾಗಿ, ಬಿಎಂಆರ್ಸಿಎಲ್ ಬೆಂಗಳೂರಿನ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ 10 ನೂತನ ಸ್ವಯಂ ಸೇವಾ ಟಿಕೆಟ್ ಯಂತ್ರಗಳನ್ನು ಸ್ಥಾಪಿಸಿದೆ.

ಈ ಯಂತ್ರಗಳು QR-ಆಧಾರಿತ ಟಿಕೆಟ್ಗಳನ್ನು ತ್ವರಿತವಾಗಿ ಮತ್ತು ಸಂಪರ್ಕರಹಿತವಾಗಿ ವಿತರಿಸಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ, ಇದು ಸಾಂಪ್ರದಾಯಿಕ ಏಕ ಪ್ರಯಾಣ ಟೋಕನ್ಳನ್ನು ಕ್ರಮೇಣ ಬದಲಾಯಿಸುತ್ತದೆ. ಸರಳವಾದ ಎರಡು-ಹಂತದ ಪ್ರಕ್ರಿಯೆಯೊಂದಿಗೆ, ಪ್ರಯಾಣಿಕರು 30 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಟಿಕೆಟ್ ಪಡೆಯಬಹುದು.

* ನಿಮ್ಮ ಗಮ್ಯಸ್ಥಾನ ಆಯ್ಕೆಮಾಡಿ:
ಪ್ರಯಾಣಿಕರು ಡ್ರಾಪ್-ಡೌನ್ ಮೆನು ಅಥವಾ ನಕ್ಷೆಯನ್ನು ಉಪಯೋಗಿಸಿ ಗಮ್ಯಸ್ಥಾನವನ್ನು ಆಯ್ಕೆ ಮಾಡಬಹುದು. ನಂತರ ಪ್ರಯಾಣಿಕರ ಸಂಖ್ಯೆಯನ್ನು ನಮೂದಿಸಿ, ಫೇರ್ ಪರಿಶೀಲಿಸಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

* ಪಾವತಿ ಮಾಡಿ:
ಯಾವುದೇ ಯುಪಿಐ ಆಧಾರಿತ ಮೊಬೈಲ್ ಆ್ಯಪ್ ಗಳ ಮೂಲಕ ಪಾವತಿ ಮಾಡಬಹುದಾಗಿದೆ. ಪಾವತಿ ಯಶಸ್ವಿಯಾದ ನಂತರ ತಕ್ಷಣವೇ ಪೇಪರ್ ಕ್ಯೂಆರ್ ಟಿಕೆಟ್ ಪ್ರಕಟವಾಗುತ್ತದೆ.
ಈ ಕ್ಯೂಆರ್ ಟಿಕೆಟ್ಗಳನ್ನು ನಿಲ್ದಾಣದ ಎಂಟ್ರಿ ಮತ್ತು ಎಕ್ಸಿಟ್ ಗೇಟ್ಗಳಲ್ಲಿ ಬಳಸಬಹುದಾಗಿದೆ. ಪ್ರಯಾಣ ಮುಗಿಸಿದ ನಂತರ, ಪ್ರಯಾಣಿಕರು ಟಿಕೆಟ್ ಗಳನ್ನು ನಿಗದಿತ ಕಸದ ಬಾಕ್ಷುಗಳಲ್ಲಿ ಹಾಕುವಂತೆ ಬಿಎಂಆರ್ಸಿಎಲ್ ಮನವಿ ಮಾಡುತ್ತಿದೆ ಇದು ಸ್ವಚ್ಛತೆ ಮತ್ತು ಪರಿಸರಸ್ನೇಹಿ ಕ್ರಮಗಳ ಭಾಗವಾಗಿದೆ.
“ಪ್ರಯಾಣಿಕರ ಅನುಭವವನ್ನು ಸುಧಾರಿಸಲು ನಾವು ತಂತ್ರಜ್ಞಾನವನ್ನು ಅಳವಡಿಸುತ್ತಿದ್ದೇವೆ. ಸ್ವಯಂ ಸೇವಾ ಟಿಕೆಟ್ ಯಂತ್ರಗಳ ಪರಿಚಯವು ನಮ್ಮ ಮೆಟ್ರೋ ಸೇವೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ, ಸುಗಮವಾಗಿ ಮತ್ತು ಆಧುನಿಕ ಪಾವತಿ ವಿಧಾನಗಳೊಂದಿಗೆ ಹೊಂದಿಕೊಳ್ಳುವಂತೆ ಮಾಡುವ ಮಹತ್ವದ ಹೆಜ್ಜೆಯಾಗಿದೆ. ಪ್ರಯಾಣಿಕರ ಅನುಕೂಲತೆ ಮತ್ತು ಸುಲಭ ಪ್ರವೇಶದತ್ತ ಇದು ನಮ್ಮ ಬದ್ಧತೆಯ ಪ್ರತಿಬಿಂಬವಾಗಿದೆ.” ಎಂದು ಬಿಎಂಆರ್ ಸಿಎಲ್ ತಿಳಿಸಿದೆ.

    For Latest News Updates, Join Our Whatsapp Community🚩
    ranjith
    ranjith
    Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
    RELATED ARTICLES

    Most Popular