HomeIndiaQR ಕೋಡ್ ಮೆಹಂದಿ: ರಕ್ಷಾಬಂಧನ ಹಬ್ಬದಲ್ಲಿ ಭಾರಿ ವೈರಲ್ ಆಗುತ್ತಿದೆ ಈ ʼಹೆನ್ನಾ ಆರ್ಟ್ʼ

QR ಕೋಡ್ ಮೆಹಂದಿ: ರಕ್ಷಾಬಂಧನ ಹಬ್ಬದಲ್ಲಿ ಭಾರಿ ವೈರಲ್ ಆಗುತ್ತಿದೆ ಈ ʼಹೆನ್ನಾ ಆರ್ಟ್ʼ

ಇಂದು ರಕ್ಷಾಬಂಧನ ಹಬ್ಬ. ಅಣ್ಣ-ತಂಗಿಯರ ಬಾಂಧವ್ಯವನ್ನು ಸಾರುವ ಈ ಹಬ್ಬವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಹಬ್ಬದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ QR ಕೋಡ್ ಮೆಹಂದಿಯೊಂದು ಎಲ್ಲರ ಗಮನ ಸೆಳೆಯುತ್ತಿದೆ.

ರಕ್ಷಾಬಂಧನ ಅಕ್ಕ-ತಂಗಿಯರು ಸಹೋದರನಿಗೆ ರಾಖಿಯನ್ನು ಕಟ್ಟುವ ಮೂಲಕ ಸಹೋದರನ ಶ್ರೇಯಸ್ಸು ಹಾಗೂ ತನ್ನ ರಕ್ಷಣೆಯನ್ನು ಬಯಸುತ್ತಾರೆ. ಇತ್ತೀಚಿನ ದಿನಗಳಲ್ಲಿ ರಾಖಿ ಕಟ್ಟುವ ಮೂಲಕ ಸಹೋದರನಿಂದ ಭಾರಿ ಗಿಫ್ಟ್ ಪಡೆಯುವುದು, ಹಣ ಪಡೆಯುವುದು ಕೂಡ ರೂಢಿಯಾಗಿಬಿಟ್ಟಿದೆ. ಇದೀಗ ರಕ್ಷಾಬಂಧನದ ಹಬ್ಬದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಕ್ಯೂ ಆರ್ ಕೋಡ್ ಮೆಹಂದಿ ನೆಟ್ಟಿಗರ ಗಮನ ಸೆಳೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯುವತಿಯ ಕೈ ಮೇಲೆ ಹೆನ್ನಾ ಆರ್ಟ್ ನಲ್ಲಿ ಅದ್ಭುತವಾಗಿ ಮೂಡಿರುವ QR Code ಮೆಹಂದಿ ಸಾಕಷ್ಟು ಕ್ರಿಯೆಟಿವ್ ಆಗಿದೆ. ಕೈ ಮೇಲೆ ಮೂಡಿರುವ ಕ್ಯೂರ್ ಕೋಡ್ ಮೆಹಂದಿ ಆರ್ಟ್ ನ್ನು ಸ್ಕ್ಯಾನರ್ ಆಗಿ ಬಳಸಿ ಹಣ ಸಂದಾಯವನ್ನೂ ಮಾಡಬಹುದು….ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.. ಅದೇನೆ ಇರಲಿ ಕ್ಯೂ ಆರ್ ಕೋಡ್ ನ ಈ ಹೆನ್ನಾ ಆರ್ಟ್ ಕ್ರಿಯೆಟಿವಿಟಿಗೆ ವ್ಹಾವ್…! ಎನ್ನಲೇ ಬೇಕು.

 

For Latest News Updates, Join Our Whatsapp Community🚩
RELATED ARTICLES

Most Popular