ಚಾಮರಾಜನಗರ: ಹೆಚ್.ಡಿ.ಕುಮಾರಸ್ವಾಮಿ ಕಿಂಗ್ ಅಲ್ಲ, ಕಿಂಗ್ ಮೇಕರ್ ಕೂಡ ಆಗಲ್ಲ. ಜೆಡಿಎಸ್ ಪಕ್ಷ ಯಾವಾಗ ಸ್ವಂತ ಬಲದಿಂದ ಬಂದಿದೆ? ಎಂದು ಸಚಿವ ಪುಟ್ಟರಂಗ ಶೆಟ್ಟಿ ವಾಗ್ದಾಳಿ ನಡೆಸಿದ್ದಾರೆ.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪುಟ್ಟರಂಗ ಶೆಟ್ಟಿ, ಬಿಡದಿ ಟೌನ್ ಶಿಪ್ ವಿರೋಧಿಸಿ ಜೆಡಿಎಸ್ ಪಾದಯಾತ್ರೆ ವಿಚಾರವಾಗಿ ಪ್ರತಿಕ್ರಿಯಿಸಿದರು. ಬಿಡಡಿ ಟೌನ್ ಶಿಪ್ ಯೋಜನೆ ಆರಂಭಿಸಿದ್ದು ನಾವಾ? ಇಲ್ಲಾ ಅವರಾ? ಎಂದು ವ್ಯಂಗ್ಯವಾಡಿದರು.
ಇದೇ ವೇಳೆ ಅಸಮಾಧಾನಿತ ಶಾಸಕರ ಸಕುವಾಗಿ ಸಚಿವ ಸ್ಥಾನ ತ್ಯಾಗದ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಹೈಕಮಾಂಡ್ ಹೇಳಿದರೆ ನಾನು ಕೂಡ ಸಚಿವ ಸ್ಥಾನ ತ್ಯಾಗ ಮಾಡಲು ಸಿದ್ಧ ಎಂದರು.
ಖಾತೆಗೆ ರೇಟ್ ಫಿಕ್ಸ್ ಮಾಡಲಾಗಿದೆ ಎಂಬ ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಕ್ಕೆ, ಛಲವಾದಿ ನಾರಾಯಣಸ್ವಾಮಿ ಎಷ್ಟು ದುಡ್ಡು ಕೊಟ್ತು ಎಂಎಲ್ ಸಿ ಆದ್ರು? ನಮ್ಮ ಪಕ್ಷದಲ್ಲಿ ಈ ರೀತಿಯ ಪದ್ಧತಿ ಇಲ್ಲವೇ ಇಲ್ಲ ಎಂದು ಹೇಳಿದರು.

