HomeKarnatakaಪ್ರವಾಸಿಗರಿಗೆ ಗುಡ್‌ ನ್ಯೂಸ್:‌ ಕಬ್ಬನ್‌ ಉದ್ಯಾನವನದಲ್ಲಿ ಮತ್ತೆ ಹಳಿಗಿಳಿಯಲಿದೆ ʼಪುಟಾಣಿʼ ರೈಲು

ಪ್ರವಾಸಿಗರಿಗೆ ಗುಡ್‌ ನ್ಯೂಸ್:‌ ಕಬ್ಬನ್‌ ಉದ್ಯಾನವನದಲ್ಲಿ ಮತ್ತೆ ಹಳಿಗಿಳಿಯಲಿದೆ ʼಪುಟಾಣಿʼ ರೈಲು

ಬೆಂಗಳೂರಿನ ಜನಪ್ರಿಯ ಪುಟಾಣಿ ಎಕ್ಸ್‌ಪ್ರೆಸ್ ಮಾರ್ಚ್ 8 ರಿಂದ ಕಬ್ಬನ್ ಪಾರ್ಕ್‌ ನಲ್ಲಿ ಮರು ಪ್ರಾರಂಭಿಸಲು ಸಿದ್ಧವಾಗಿದೆ. ಪ್ರವಾಸಿಗರಿಗೆ ಸಂತೋಷದ ಸವಾರಿ ನೀಡಲು ಹೆಸರುವಾಸಿಯಾಗಿದ್ದ ಈ ಆಟಿಕೆ ರೈಲು 2019 ರಲ್ಲಿ ದುರಸ್ತಿ ಕಾರ್ಯಗಳಿಂದಾಗಿ ಸ್ಥಗಿತಗೊಂಡಿತ್ತು.

ನೈರುತ್ಯ ರೈಲ್ವೇ, ಇದೀಗ ಪುಟಾಣಿ ರೈಲಿನ ಆರಂಭವನ್ನು  ಘೋಷಿಸಿದೆ. ಕಬ್ಬನ್ ಉದ್ಯಾನವನಕ್ಕೆ ಭೇಟಿ ನೀಡುವ ಮಕ್ಕಳು ಹಾಗೂ ಪ್ರವಾಸಿಗರಿಗೆ ಈ ರೈಲು ಅಚ್ಚುಮೆಚ್ಚಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅದರಲ್ಲಿ ಸವಾರಿ ಮಾಡುವುದು ಬೆಂಗಳೂರಿನ ಮಕ್ಕಳ ನೆಚ್ಚಿನ ವಾರಾಂತ್ಯದ ಚಟುವಟಿಕೆಗಳಲ್ಲಿ ಒಂದಾಗಿತ್ತು. ಆದಾಗ್ಯೂ, 2019 ರಲ್ಲಿ, ಟ್ರ್ಯಾಕ್‌ನಲ್ಲಿ ಆಗಿದ್ದ ಹಾನಿಯನ್ನು ಗಮನಿಸಿ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.

ಅಗಲಗೊಳಿಸಲಾದ ಟ್ರ್ಯಾಕ್‌ಗಳನ್ನು ಸರಿಪಡಿಸಲಾಗುತ್ತಿದೆ ಮತ್ತು ಕೆಲವು ಮರು-ಪೇಂಟಿಂಗ್ ಕೆಲಸಗಳು ಸಹ ಪ್ರಕ್ರಿಯೆಯಲ್ಲಿವೆ. ಶನಿವಾರದ ವೇಳೆಗೆ 900 ಮೀಟರ್ ಟ್ರ್ಯಾಕ್ ಸಿದ್ಧವಾಗಲಿದೆ. ಮರು ಉದ್ಘಾಟನೆಗೂ ಮುನ್ನ ನಾವು ಪ್ರಾಯೋಗಿಕ ಓಡಾಟಗಳನ್ನು ನಡೆಸುತ್ತೇವೆ ಎಂದು SWR ನ ಅಧಿಕಾರಿಯೊಬ್ಬರು ʼಟೈಮ್ಸ್ ಆಫ್ ಇಂಡಿಯಾʼ ಗೆ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular