BREAKING: ಕಾಲುವೆಗೆ ಬಸ್ ಬಿದ್ದು ಘೋರ ದುರಂತ; 8 ಜನ ಸಾವು, 20 ಮಂದಿ ನಾಪತ್ತೆ

ಚಂಡೀಗಡ: ಪಂಜಾಬ್‌ ನ ಮುಕ್ತಸರ್ ಜಿಲ್ಲೆಯಲ್ಲಿ ಖಾಸಗಿ ಬಸ್ ಸಿರ್ಹಿಂದ್ ಫೀಡರ್ ಕಾಲುವೆಗೆ ಬಿದ್ದ ಪರಿಣಾಮ ಕನಿಷ್ಠ ಎಂಟು ಪ್ರಯಾಣಿಕರು ಸಾವನ್ನಪ್ಪಿದ್ದಾರೆ.

ಅಧಿಕಾರಿಗಳ ಪ್ರಕಾರ, ಘಟನೆ ಸಂಭವಿಸಿದಾಗ ಬಸ್‌ನಲ್ಲಿ ಸುಮಾರು 35 ಪ್ರಯಾಣಿಕರು ಇದ್ದರು. ಬಸ್ ಮುಕ್ತಸರದಿಂದ ಕೊಟ್ಕಾಪುರಕ್ಕೆ ಹೋಗುತ್ತಿತ್ತು.

ಮುಕ್ತಸರ-ಕೊಟ್ಕಾಪುರ ರಸ್ತೆಯ ಝಬೆಲವಾಲಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ಘಟನೆಯ ಸಮಯದಲ್ಲಿ ಮಳೆಯಾಗುತ್ತಿತ್ತು. ಬ್ರೇಕ್ ಹಾಕಿದಾಗ ಬಸ್ ರಸ್ತೆಯಿಂದ ಸ್ಕಿಡ್ ಆಗಿದೆ. ರಕ್ಷಣಾ ಕಾರ್ಯಾಚರಣೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್) ತಂಡವನ್ನು ಕರೆಸಲಾಗಿದೆ.

ಮುಕ್ತಸರ್ ಡೆಪ್ಯುಟಿ ಕಮಿಷನರ್ ರೂಹೀ ಡಗ್ ಅವರು ಮಾಹಿತಿ ನೀಡಿ, ಕೆಲವು ಪ್ರಯಾಣಿಕರು ನೀರಿನ ಬಲವಾದ ಪ್ರವಾಹದಿಂದ ಕೊಚ್ಚಿ ಹೋಗಿರಬಹುದು ಎಂದು ಶಂಕಿಸಲಾಗಿದೆ. ಕ್ರೇನ್ ಸಹಾಯದಿಂದ ಬಸ್ ಅನ್ನು ಕಾಲುವೆಯಿಂದ ಹೊರತೆಗೆಯಲಾಗಿದೆ. ಕೆಲವು ಗಾಯಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದ್ದಾರೆ.

ಬಸ್ ನಿರ್ವಾಹಕರ ಪ್ರಕಾರ, ಬಸ್‌ನಲ್ಲಿ ಒಟ್ಟು ಪ್ರಯಾಣಿಕರ ಸಂಖ್ಯೆ ಸುಮಾರು 35 ಆಗಿರಬಹುದು. ಅಪಘಾತ ಸಂಭವಿಸಿದ ನಂತರ ಗ್ರಾಮಸ್ಥರು ಪ್ರಯಾಣಿಕರನ್ನು ರಕ್ಷಿಸಲು ಮುಂದಾದರು.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು, ಜಿಲ್ಲಾಡಳಿತದ ತಂಡಗಳು ಸ್ಥಳದಲ್ಲಿದ್ದು, ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಅವರು ನಿಯಮಿತವಾಗಿ ನವೀಕರಣಗಳನ್ನು ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read