HomeIndiaಪುಣೆ ಬಾಂಬ್ ಸ್ಫೋಟ ಪ್ರಕರಣ: ಭಟ್ಕಳದ ಅಬ್ದುಲ್ ಕಬೀರ್ ಗೆ ಎಟಿಎಸ್ ನೋಟಿಸ್

ಪುಣೆ ಬಾಂಬ್ ಸ್ಫೋಟ ಪ್ರಕರಣ: ಭಟ್ಕಳದ ಅಬ್ದುಲ್ ಕಬೀರ್ ಗೆ ಎಟಿಎಸ್ ನೋಟಿಸ್

ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ 2008ರಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಬಂಧಿಸಿದಂತೆ ಆರೋಪಿ ಉಗ್ರ ಭಟ್ಕಳದ ಅಬ್ದುಲ್ ಕಬೀರ್ ಖಾದೀರ್ ಗೆ ಮುಂಬೈ ಎಟಿಎಸ್ ನೋಟಿಸ್ ನೀಡಿದೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೂಲದ ಅಭ್ದುಲ್ ಕಬೀರ್ ಖಾದೀರ್ ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ವಿಚರಣೆಗೆ ಹಾಜರಾಗುವಂತೆ ತಹಶೀಲ್ದಾರ್ ಕಚೇರಿ, ಪುರಸಭೆಗೆ ನೋಟಿಸ್ ಅಂಟಿಸಲಾಗಿದೆ.

ಪುಣೆಯಲ್ಲಿ ನಡೆದಿರುವ ಭಯೋತ್ಪಾದನೆ ಚಟುವಟಿಕೆಗೆ ಸಂಬಂಧಿಸಿದಂತೆ ಆರೋಪಿ ಅಬ್ದುಲ್ ತಲೆಮರೆಸಿಕೊಂಡಿದ್ದಾನೆ. ಭಟ್ಕಳದ ಮನೆಗೆ ಬಂದು ಪರಿಶೀಲಿಸಿರುವ ಮುಂಬೈ ಎಟಿಎಸ್ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಮನೆಗೆ ನೋಟಿಸ್ ಅಂಟಿಸಿ ಹೋಗಿದ್ದಾರೆ. ಜೂನ್ 10ರಂದು ಎಟಿಎಸ್ ಅಧಿಕಾರಿಗಳು ಭಟ್ಕಳಕ್ಕೆ ಆಗಮಿಸಿ ಅಬ್ದುಲ್ ಕಬೀರ್ ಮನೆಗೆ ಹಾಗೂ ತಾಲೂಕು ಕಚೇರಿ ಪುರಸಭೆಗೆ ನೋಟಿಸ್ ಅಂಟಿಸಿ ಹೋಗಿದ್ದಾರೆ ಎಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular