ನವದೆಹಲಿ : ನಿಯಮಬಾಹಿರ ಇ-ಫಾರ್ಮಸಿಗಳು ಮತ್ತು ಎಐ (AI) ತಂತ್ರಜ್ಞಾನ ಬಳಸಿ ಸೃಷ್ಟಿಸುತ್ತಿರುವ ನಕಲಿ ಪ್ರಿಸ್ಕ್ರಿಪ್ಷನ್‌ಗಳಿಂದ ಸಾರ್ವಜನಿಕ ಆರೋಗ್ಯಕ್ಕೆ ಧಕ್ಕೆಯಾಗುತ್ತಿದೆ ಎಂದು ಖಂಡಿಸಿ, ಮೇ 20 ರಂದು ದೇಶಾದ್ಯಂತ ಮೆಡಿಕಲ್ ಶಾಪ್‌ಗಳ ಬಂದ್‌ಗೆ ಔಷಧ ವ್ಯಾಪಾರಿಗಳ ಒಕ್ಕೂಟಗಳು ಕರೆ ನೀಡಿವೆ.
ಹೌದು. ಮೇ 20 ರಂದು ದೇಶಾದ್ಯಂತ ಮೆಡಿಕಲ್ ಶಾಪ್‌ಗಳ ಬಂದ್‌ಗೆ ‘ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ಸ್ ಅಂಡ್ ಡ್ರಗ್ಗಿಸ್ಟ್ಸ್’ (AIOCD) ಮತ್ತು ‘ತೆಲಂಗಾಣ ಕೆಮಿಸ್ಟ್ಸ್ ಅಂಡ್ ಡ್ರಗ್ಗಿಸ್ಟ್ಸ್ ಅಸೋಸಿಯೇಷನ್’ ಕರೆ ನೀಡಿವೆ.
ಈ ಪ್ರತಿಭಟನೆಯಲ್ಲಿ ದೇಶಾದ್ಯಂತ ಇರುವ 12.40 ಲಕ್ಷ ಕೆಮಿಸ್ಟ್‌ಗಳು ಮತ್ತು ವಿತರಕರು (ಡಿಸ್ಟ್ರಿಬ್ಯೂಟರ್ಸ್) ಭಾಗವಹಿಸುತ್ತಿದ್ದಾರೆ.
ನಿಯಮಗಳಿಗೆ ವಿರುದ್ಧವಾಗಿ ನಡೆಯುತ್ತಿರುವ ಇ-ಫಾರ್ಮಸಿಗಳು, ಆನ್‌ಲೈನ್‌ನಲ್ಲಿ ಮನಬಂದಂತೆ ಆಂಟಿಬಯೋಟಿಕ್‌ಗಳು ಮತ್ತು ವ್ಯಸನಕಾರಿಯಾಗುವ ಔಷಧಿಗಳ ಮಾರಾಟ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮೂಲಕ ಸೃಷ್ಟಿಸುತ್ತಿರುವ ನಕಲಿ ಪ್ರಿಸ್ಕ್ರಿಪ್ಷನ್‌ಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳ ಭಾರಿ ರಿಯಾಯಿತಿಗಳಿಂದಾಗಿ (ಡಿಸ್ಕೌಂಟ್) ಸಾರ್ವಜನಿಕ ಆರೋಗ್ಯಕ್ಕೆ ತೀವ್ರ ಸಂಕಷ್ಟ ಎದುರಾಗಿದೆ ಎಂದು ಅಸೋಸಿಯೇಷನ್‌ಗಳು ಕಳವಳ ವ್ಯಕ್ತಪಡಿಸಿವೆ. ಕೇಂದ್ರ ಸರ್ಕಾರ ಈ ಕೂಡಲೇ ಸ್ಪಂದಿಸಿ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಹೂಡುವುದಾಗಿ ಅವರು ಎಚ್ಚರಿಸಿದ್ದಾರೆ.

