HomeLatest NewsSHOCKING : ಡಾನ್ ಆಗಬೇಕೆಂದು ಹೆತ್ತ ತಾಯಿಯನ್ನೇ ಬರ್ಬರವಾಗಿ ಹತ್ಯೆಗೈದ 16 ವರ್ಷದ ಮಗ !

SHOCKING : ಡಾನ್ ಆಗಬೇಕೆಂದು ಹೆತ್ತ ತಾಯಿಯನ್ನೇ ಬರ್ಬರವಾಗಿ ಹತ್ಯೆಗೈದ 16 ವರ್ಷದ ಮಗ !

ಆಂಧ್ರಪ್ರದೇಶದಲ್ಲಿ ಒಂದು ದಿಗಿಲುಗೊಳಿಸುವ ಘಟನೆ ಬೆಳಕಿಗೆ ಬಂದಿದೆ. ಮಾಫಿಯಾ ಡಾನ್ ಆಗಬೇಕೆಂದು ಕನಸು ಕಾಣುತ್ತಿದ್ದ 16 ವರ್ಷದ ಬಾಲಕನೊಬ್ಬ ತನ್ನ ತಾಯಿಯನ್ನೇ ಕೊಲೆ ಮಾಡಿದ್ದಾನೆ. ಆನಂತರ ಮನೆಯಲ್ಲಿದ್ದ 9 ತೊಲ ಚಿನ್ನವನ್ನು ದೋಚಿ ಪಲಾಯನ ಮಾಡುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಎಲ್ಲಿ ನಡೆದಿದ್ದು ಘಟನೆ..

 ಈ ಘಟನೆ ವಿಜಯನಗರಂ ಜಿಲ್ಲೆಯ ರಾಜಾಂ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮುಂಜೇಟಿ ಸತೀಶ್ ಮತ್ತು ಸ್ಪಂದನಾ ದಂಪತಿಯ ಮಗ ಸ್ಥಳೀಯ ಶಾಲೆಯೊಂದರಲ್ಲಿ 10ನೇ ತರಗತಿಯವರೆಗೆ ಓದಿದ್ದು, ಈಗ ಇಂಟರ್‌ಮೀಡಿಯಟ್‌ಗೆ (ಪಿಯುಸಿ) ಸೇರಲು ಸಿದ್ಧನಾಗುತ್ತಿದ್ದ. ಶಾಲೆಯಲ್ಲಿ ಒಬ್ಬ ಹುಡುಗಿಗೆ ಪ್ರೇಮ ಪತ್ರ (ಲವ್ ಲೆಟರ್) ಬರೆದಿದ್ದಕ್ಕಾಗಿ ಶಾಲೆಯ ಆಡಳಿತ ಮಂಡಳಿಯು ಅವನ ತಾಯಿಯನ್ನು ಕರೆಸಿ ದೂರು ನೀಡಿತ್ತು. ಇದರಿಂದ ತಾಯಿ ಅವನನ್ನು ಹಲವು ಬಾರಿ ಗದರಿಸಿದ್ದರು. ಅಷ್ಟೇ ಅಲ್ಲದೆ, ಹಿರಿಯರೊಂದಿಗೆ ಮರ್ಯಾದೆಯಿಂದ ಇರಬೇಕು, ಚೆನ್ನಾಗಿ ಓದಿ ಶಿಸ್ತಿನಿಂದ ಇರಬೇಕೆಂದು ಬುದ್ಧಿ ಹೇಳಿದ್ದರು. ಶಾಲೆಯಲ್ಲಿ ಹುಡುಗಿಗೆ ಲವ್ ಲೆಟರ್ ಬರೆದ ಕಾರಣದಿಂದ ಅವರು ಪ್ರತಿದಿನ ಅವನ ಬ್ಯಾಗ್‌ ಅನ್ನು ತಪಾಸಣೆ ಮಾಡುವುದು, ಸರಿಯಾಗಿ ನಡೆದುಕೊಳ್ಳಬೇಕೆಂದು ಹೇಳುವುದು ಮಾಡುತ್ತಿದ್ದರು. ಈ ಕಾರಣದಿಂದ ಬಾಲಕ ತಾಯಿಯ ಮೇಲೆ ದ್ವೇಷ ಸಾಧಿಸಲು ಶುರುಮಾಡಿದ. ತಾಯಿ ತನಗೆ ಕಿರುಕುಳ (ಟಾರ್ಚರ್) ನೀಡುತ್ತಿದ್ದಾರೆ ಎಂದು ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತನ್ನ ತಂದೆ, ತಾಯಿಯನ್ನು ಬಿಟ್ಟು ಬೇರೊಬ್ಬ ಮಹಿಳೆಯೊಂದಿಗೆ ವಾಸವಾಗಿದ್ದಾನೆ, ನಾವು ಮುಂಬೈಗೆ ಹೋಗಿ ಮಾಫಿಯಾ ಡಾನ್‌ಗಳಾಗೋಣ ಎಂದು ಆರೋಪಿ ಮತ್ತೊಬ್ಬ ಬಾಲಕನಿಗೆ ಹೇಳಿದ್ದಾನೆ. ಡಾನ್ ಆಗಬೇಕಾದರೆ ಮೊದಲು ಅಪರಾಧದ ಹಿನ್ನೆಲೆ (ಕ್ರೈಮ್ ಹಿಸ್ಟರಿ) ಇರಬೇಕೆಂದು ಜಪಾನ್ ಸಿನಿಮಾಗಳನ್ನು ನೋಡಿ ಪ್ರೇರಣೆ ಪಡೆದಿದ್ದ. ಅದಕ್ಕಾಗಿ ತನ್ನ ತಾಯಿಯನ್ನೇ ಕೊಲೆ ಮಾಡಬೇಕೆಂದು ಸ್ನೇಹಿತನೊಂದಿಗೆ ಸೇರಿ ಪ್ಲಾನ್ ಮಾಡಿದ್ದಾನೆ. ಸ್ಪಂದನಾ ಹೊರಗೆ ಹೋಗಿದ್ದ ಸಮಯದಲ್ಲಿ ತನ್ನ ಮಿತ್ರನನ್ನು ಮನೆಗೆ ಕರೆಸಿ ಬಾರ್ಥ್ರೂಂನಲ್ಲಿ ಅಡಗಿರಲು ಹೇಳಿದ್ದಾನೆ. ತಾಯಿ ಹೊರಗಿನಿಂದ ಬಂದ ತಕ್ಷಣ ಕಾಲು ತೊಳೆಯಲು ಬಾತ್‌ರೂಂಗೆ ಬರುತ್ತಾರೆ, ಅಲ್ಲಿಗೆ ಬಂದ ತಕ್ಷಣ ದಾಳಿ ಮಾಡಬೇಕೆಂದು ಹೇಳಿದ್ದಾನೆ. ಆರೋಪಿ ಹೇಳಿದಂತೆಯೇ ಸ್ಪಂದನಾ ಬಾತ್‌ರೂಂಗೆ ಹೋದಾಗ, ಅಲ್ಲೇ ಹೊಂಚು ಹಾಕಿ ಕುಳಿತಿದ್ದ ಮತ್ತೊಬ್ಬ ಬಾಲಕ ಅವಳ ಕುತ್ತಿಗೆಯನ್ನು ಗಟ್ಟಿಯಾಗಿ ಹಿಡಿದು ಉಸಿರುಗಟ್ಟಿಸಿದ್ದಾನೆ. ಆದರೂ ದೇಹದಲ್ಲಿ ಚಲನೆ ಇದ್ದ ಕಾರಣ ಇಬ್ಬರೂ ಸೇರಿ ಅವಳ ಮೇಲೆ 16 ಬಾರಿ ಕತ್ತಿಯಿಂದ ಇರಿದಿದ್ದಾರೆ. ನಂತರ ರಕ್ತದ ಕಲೆಗಳು ಇಲ್ಲದಂತೆ ಬಾತ್‌ರೂಂ ತೊಳೆದು, ಮನೆಯಲ್ಲಿ ಬಚ್ಚಿಟ್ಟಿದ್ದ 9 ತೊಲ ಚಿನ್ನ ಮತ್ತು 5 ಸಾವಿರ ರೂಪಾಯಿ ನಗದನ್ನು ತೆಗೆದುಕೊಂಡಿದ್ದಾರೆ.

ನಂತರ ಶವವನ್ನು ಸೀರೆಯಲ್ಲಿ ಸುತ್ತಿ ಪಕ್ಕದಲ್ಲಿದ್ದ ಕೋನೇರು (ಕೆರೆ/ಕಲ್ಯಾಣಿ) ಯಲ್ಲಿ ಹಾಕಿ ಅಲ್ಲಿಂದ ಪರಾರಿಯಾಗಿದ್ದಾರೆ. ಈ ತಿಂಗಳು 4ನೇ ತಾರೀಖಿನಂದು ಈ ಕೊಲೆ ನಡೆದಿದ್ದು, ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಅಸಲಿ ನಿಜ ಹೊರಬಿದ್ದಿದೆ. ಕೊಲೆ ಮಾಡಿದ ನಂತರ ಆರೋಪಿಗಳು ಭುವನೇಶ್ವರ್, ಮುಂಬೈ, ವೈಜಾಗ್, ತಿರುಪತಿಗೆ ಹೋಗಿ ಮತ್ತೆ ಪಲಾಸಾಗೆ ಹೋಗುತ್ತಿದ್ದಾಗ ಚಿಲಕಪಾಲಂ ಹತ್ತಿರ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಫೋನ್ ಸಿಮ್ ಕಾರ್ಡ್‌ಗಳನ್ನು ತೆಗೆದುಹಾಕಿ ಪಕ್ಕಾ ಸ್ಕೆಚ್ ಹಾಕಿ ತಪ್ಪಿಸಿಕೊಂಡಿದ್ದರೂ, ಹೊಸ ಸಿಮ್‌ಗಳನ್ನು ಹಾಕಿ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಸ್ನೇಹಿತರ ಸಂಪರ್ಕದಲ್ಲಿದ್ದರು. ಇದರಿಂದ ಇನ್‌ಸ್ಟಾಗ್ರಾಮ್ ಸಂದೇಶಗಳ ಆಧಾರದ ಮೇಲೆ ಪೊಲೀಸರು ಆರೋಪಿಗಳ ಲೊಕೇಶನ್ ಕಂಡುಹಿಡಿದರು.

ಬಂಧಿಸಿದ ನಂತರ ಆರೋಪಿ ಹೇಳಿದ ವಿಷಯಗಳನ್ನು ಕೇಳಿ ಪೊಲೀಸರೇ ಆಶ್ಚರ್ಯಪಟ್ಟರು. ಒಂದು ವರ್ಷದ ಮುಂಚೆ ಮತ್ತೊಬ್ಬ ಬಾಲಕನ ಪರಿಚಯವಾಗಿದ್ದು, ಇಬ್ಬರೂ ಸೇರಿ ಜಪಾನ್ ಸಿನಿಮಾಗಳನ್ನು ನೋಡುತ್ತಿದ್ದೆವು ಎಂದು ಹೇಳಿದ್ದಾನೆ. ಅವನಿಗೂ ಕೂಡ ಮಾಫಿಯಾ ಡಾನ್ ಆಗಬೇಕೆಂಬ ಆಸೆ ಇದ್ದ ಕಾರಣ ಆ್ಯಕ್ಷನ್ ಅನಿಮೇಷನ್ ಸಿನಿಮಾಗಳನ್ನು ನೋಡುತ್ತಾ ಅವುಗಳನ್ನು ಅನುಕರಿಸುತ್ತಿದ್ದೆವು ಎಂದು ತಿಳಿಸಿದ್ದಾನೆ. ಮಾಫಿಯಾದಲ್ಲಿ ಸೇರಬೇಕಾದರೆ ಸಾಕ್ಷಿ ತೋರಿಸಬೇಕೆಂದು ತನ್ನ ತಾಯಿಯನ್ನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಮತ್ತೊಂದು ವಿಷಯವೇನೆಂದರೆ, ಆರೋಪಿಗೆ 10ನೇ ತರಗತಿಯಲ್ಲಿ 525 ಅಂಕಗಳು ಬಂದಿದ್ದವು ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular