HomeKarnatakaBIG NEWS: ಪಿಯು ವಿದ್ಯಾರ್ಥಿ ಮೇಲೆ ಸಹಪಾಠಿಗಳಿಂದಲೇ ಮಾರಣಾಂತಿಕ ಹಲ್ಲೆ; ಚಾಕು ಇರಿತ

BIG NEWS: ಪಿಯು ವಿದ್ಯಾರ್ಥಿ ಮೇಲೆ ಸಹಪಾಠಿಗಳಿಂದಲೇ ಮಾರಣಾಂತಿಕ ಹಲ್ಲೆ; ಚಾಕು ಇರಿತ

ಉಡುಪಿ: ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬನ ಮೇಲೆ ಸಹಪಾಠಿಗಳೇ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಚಾಕು ಇರಿದು ಕೊಲೆಗೆ ಯತ್ನಿಸಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದಿದೆ.

ಬ್ರಹ್ಮಾವರದ ವಿದ್ಯಾ ಕೋಚಿಂಗ್ ಸೆಂಟರ್ ನ ವಿದ್ಯಾರ್ಥಿ ಪ್ರತೀಕ್ (17) ಹಲ್ಲೆಗೊಳಗಾದ ವಿದ್ಯಾರ್ಥಿ. ಪ್ರತೀಕ್ ಕೆಲ ದಿನಗಳ ಹಿಂದೆ ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಸಿದ್ದ. ತನ್ನ ಬೈಕ್ ನ್ನು ಸುಹಾಸ್ ಎಂಬಾತ ಕದ್ದಿದ್ದಾನೆ ಎಂದು ಆತ ಆರೋಪಿಸಿದ್ದ. ಸುಳ್ಳು ಆರೋಪ ಮಾಡಿದ್ದಾನೆ ಎಂದು ಸಿಟ್ಟಿಗೆದ್ದ ಸುಹಾಸ್ ಹಾಗೂ ಆತನ ಸ್ನೇಹಿತರು ಪ್ರತೀಕ್ ನನ್ನು ಹಿಡಿದು ಮನಸೋ ಇಚ್ಛೆ ಥಳಿಸಿದ್ದಾರೆ.

ಸುಹಾಸ್ ಸ್ನೇಹಿತ ತರುಣ್ ಎಂಬಾತ ಪ್ರತೀಕ್ ಹೊಟ್ಟೆ ಹಾಗೂ ಎಡ ಸೊಂಟಕ್ಕೆ ಇರಿದು ಕೊಲೆ ಮಾಡಲು ಯತ್ನಿಸಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿ ಪ್ರತೀಕ್ ಆಸ್ಪತ್ರೆಗೆ ದಾಖಲಾಗಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನೆ ಸಂಬಂಧ ಉಡುಪಿ ನಗರ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 143, 147, 148, 323, 324, 504, 506, 307 ಮತ್ತು 149 ಅಡಿ ಕೇಸ್ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular