HomeKarnatakaBIG NEWS: ಜನವರಿ.23ರಂದು PSI ನೇಮಕಾತಿ ಹುದ್ದೆ ಮರುಪರೀಕ್ಷೆ; ಇಲ್ಲಿದೆ ವೇಳಾಪಟ್ಟಿ, ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ

BIG NEWS: ಜನವರಿ.23ರಂದು PSI ನೇಮಕಾತಿ ಹುದ್ದೆ ಮರುಪರೀಕ್ಷೆ; ಇಲ್ಲಿದೆ ವೇಳಾಪಟ್ಟಿ, ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ

ಬೆಂಗಳೂರು: ಪಿಎಸ್ ಐ ಹುದ್ದೆ ನೇಮಕಾತಿ ಮರು ಪರೀಕ್ಷೆ ಜನವರಿ 23ರಂದು ನಡೆಯಲಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೇಳಾಪಟ್ಟಿ ಪ್ರಕಟಿಸಿದೆ.

545 ಪಿಎಸ್ ಐ ಹುದ್ದೆ ನೇಮಕಾತಿಗೆ ಜ.23ರಂದು ಬೆಂಗಳೂರು ಕೇಂದ್ರದಲ್ಲಿ ಮಾತ್ರ ಪರೀಕ್ಷೆ ನಡೆಯಲಿದೆ. ವೇಳಾಪಟ್ಟಿ ಹೀಗಿದೆ.

ಜನವರಿ 23 ಮಂಗಳವಾರ ಬೆಳಿಗ್ಗೆ 10:30ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಪೇಪರ್-1 (50) ಅಂಕ. ಮಧ್ಯಾಹ್ನ 1ರಿಂದ 2:30ರವರೆಗೆ ಪೇಪರ್-2 (150) ಅಂಕಗಳ ಪರೀಕ್ಷೆ ನಡೆಯಲಿದೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಭ್ಯರ್ಥಿಗಳು ಬೆಳಿಗ್ಗೆ 8:30ಕ್ಕೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಪ್ರವೇಶ ಪತ್ರದ ಜೊತೆಗೆ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸನ್ಸ್ ಸೇರಿದಂತೆ ಸರ್ಕಾರದ ಮಾನ್ಯತೆಯ ಯಾವುದಾದರೂ ಒಂದು ಗುರುತಿನ ಚೀಟಿ ಇದ್ದರೆ ಪರೀಕ್ಷಾ ಕೇಂದ್ರಕ್ಕೆ ಬಿಡಲಾಗುವುದು.

ಅಭ್ಯರ್ಥಿಗಳನ್ನು ಸೂಕ್ತ ತಪಾಸಣೆ ನಡೆಸಲಾಗುವುದು. ನೀರಿನ ಬಾಟಲ್, ಮೊಬೈಲ್ ನಿಷೇಧಿಸಲಾಗಿದೆ. ಅಭ್ಯರ್ಥಿಗಳು ಸಾಧ್ಯವಿದ್ದಷ್ಟು ಕಾಲರ್ ಇಲ್ಲದ ಶರ್ಟ್ ಹಾಕಿಕೊಂಡು ಬರುವುದು ಉತ್ತಮ. ಕಿವಿ ಹಾಗೂ ಬಾಯಿ ಮುಚ್ಚುವ ಬಟ್ಟೆ, ಜೀನ್ಸ್ , ಬೆಲ್ಟ್, ಶೂ ಧರಿಸಿ ಬರುವಂತಿಲ್ಲ ಎಂದು ಕೆಇಎ ತಿಳಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular