HomeKarnatakaಮುಸ್ಲಿಮರು 4-5 ಮಕ್ಕಳು ಮಾಡುವಾಗ, ಹಿಂದುಗಳು ಒಂದೆರಡು ಮಾಡ್ಕೊಂಡ್ರೆ ಸಾಕಾಗಲ್ಲ : ಶಾಸಕ ಹರೀಶ್ ಪೂಂಜಾ...

ಮುಸ್ಲಿಮರು 4-5 ಮಕ್ಕಳು ಮಾಡುವಾಗ, ಹಿಂದುಗಳು ಒಂದೆರಡು ಮಾಡ್ಕೊಂಡ್ರೆ ಸಾಕಾಗಲ್ಲ : ಶಾಸಕ ಹರೀಶ್ ಪೂಂಜಾ ಹೇಳಿಕೆ

ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರ ಭಾಷಣದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಲವು ಚರ್ಚೆಗಳನ್ನು ಹುಟ್ಟು ಹಾಕಿದೆ.

ಬೆಳ್ತಂಗಡಿ ತಾಲೂಕಿನ ಪೆರಾಡಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಹರೀಶ್ ಪೂಂಜಾ ಹೇಳಿಕೆ ವೈರಲ್ ಆಗಿದೆ. ಮುಸ್ಲಿಮರ ಜನಸಂಖ್ಯೆ 80 ಕೋಟಿ ಆಗಿ, ಹಿಂದೂಗಳ ಜನಸಂಖ್ಯೆ ಕಡಿಮೆ ಆದ್ರೆ ನಮ್ಮ ದೇಶದಲ್ಲಿ ಹಿಂದುಗಳ ಪರಿಸ್ಥಿತಿ ಹೇಗಿರುತ್ತೆ..? ಹಿಂದೂಗಳೆಲ್ಲಾ ಮನೆಯಲ್ಲಿ ಕುಳಿತು ಯೋಚನೆ ಮಾಡಿ ಎಂದಿದ್ದಾರೆ.

ಮುಸ್ಲಿಮರು ನಾಲ್ಕೈದು ಮಕ್ಕಳು ಹೆರುತ್ತಿದ್ದಾರೆ. ನಮ್ಮಲ್ಲಿ ಒಂದು ಅಥವಾ ತಪ್ಪಿದ್ರೆ ಎರಡು ಮಕ್ಕಳನ್ನು ಹೆರಲಾಗುತ್ತಿದೆ. ಹಿಂದೂಗಳ ಜನಸಂಖ್ಯೆ ಕಡಿಮೆ ಆದ್ರೆ ನಮ್ಮ ದೇಶದಲ್ಲಿ ಹಿಂದುಗಳ ಪರಿಸ್ಥಿತಿ ಹೇಗಿರುತ್ತೆ..? ಯೋಚನೆ ಮಾಡಿ ಎಂದಿದ್ದಾರೆ. ಮುಸ್ಲಿಮರು 4-5 ಮಕ್ಕಳು ಮಾಡುವಾಗ, ಹಿಂದುಗಳು 1-2 ಮಾಡ್ಕೊಂಡ್ರೆ ಸಾಕಾಗಲ್ಲ.    ಅವರು ಇರೋದು 20 ಕೋಟಿ ಅಂತಾ ಹೇಳುತ್ತಾರೆ. ದೇಶದಲ್ಲಿರುವ 20 ಕೋಟಿ ಮುಸ್ಲಿಮರಿಗೆ ನಾಲ್ಕು ನಾಲ್ಕು ಮಕ್ಕಳು ಆದ್ರೆ ಎಷ್ಟಾಗುತ್ತೆ?ʼʼ ಎಂದು ಕೇಳಿದ ಅವರು, ಅವರ ಜನಸಂಖ್ಯೆ 80 ಕೋಟಿ ಆಗುತ್ತದೆ ಎಂದರು. ಭಾರತದಲ್ಲಿ ಮುಸ್ಲಿಂಮರ ಜನಸಂಖ್ಯೆ ಹೆಚ್ಚಾದ್ರೆ ಹಿಂದುಗಳ ಪರಿಸ್ಥಿತಿ ಏನಾಗಬಹುದು ಎಂದು ಯೋಚಿಸಿ ಎಂದು ಹರೀಶ್ ಪೂಂಜಾ ಹೇಳಿಕೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular