HomeCrimeಪತ್ನಿ, ಮಕ್ಕಳಿಂದಲೇ ಘೋರ ಕೃತ್ಯ: ಆಸ್ತಿಗಾಗಿ ಮೂಕ ವ್ಯಕ್ತಿಯ ಬರ್ಬರ ಹತ್ಯೆ

ಪತ್ನಿ, ಮಕ್ಕಳಿಂದಲೇ ಘೋರ ಕೃತ್ಯ: ಆಸ್ತಿಗಾಗಿ ಮೂಕ ವ್ಯಕ್ತಿಯ ಬರ್ಬರ ಹತ್ಯೆ

ಬೀದರ್: ಆಸ್ತಿಯನ್ನು ಬೇರೆಯವರಿಗೆ ಮಾಡಿಕೊಡುತ್ತಾನೆ ಎನ್ನುವ ಅನುಮಾನ ಮತ್ತು ಆತಂಕದಿಂದ ಮೂಕ ಮತ್ತು ಕಿವುಡನಾಗಿದ್ದ ವ್ಯಕ್ತಿಯನ್ನು ಆತನ ಪತ್ನಿ, ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿ ಸೇರಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೀದರ್ ಜಿಲ್ಲೆಯ ಸಾತೋಳಿ ಗ್ರಾಮದಲ್ಲಿ ನಡೆದಿದೆ.

ಬಸವರಾಜ ಶೇರಿಕಾರ(52) ಕೊಲೆಯಾದ ವ್ಯಕ್ತಿ. ಆತನ ಪತ್ನಿ ಆಡಮ್ಮ, ಪುತ್ರರಾದ ಪ್ರಭಾಕರ, ಹನುಮಂತ, ಮಗಳು ರತ್ನಮ್ಮ ಸೇರಿ ಮನೆಯಲ್ಲಿ ಕೂಡಿ ಹಾಕಿ ಕಟ್ಟಿಗೆ, ಸಲಾಕೆಯಿಂದ ಕೈ ಕಾಲುಗಳನ್ನು ಮುರಿಯುವಂತೆ ಹೊಡೆದು ಕೊಲೆ ಮಾಡಿದ್ದಾರೆ ಎಂದು ನವೆಂಬರ್ 8ರಂದು ಮನ್ನಳ್ಳಿ ಪೊಲೀಸ್ ಠಾಣೆಗೆ ಮೃತನ ಸಹೋದರ ಮಲ್ಲಿಕಾರ್ಜುನ ಶೇರಿಕಾರ ದೂರು ನೀಡಿದ್ದಾರೆ.

ತನ್ನ ಪಾಲಿಗೆ ಬಂದಿದ್ದ ಆಸ್ತಿಯನ್ನು ಮೂಕ, ಕಿವುಡನಾಗಿದ್ದರಿಂದ ಅಪರಿಚಿತರು ತಮ್ಮ ಹೆಸರಿಗೆ ಬರೆಸಿಕೊಳ್ಳುತ್ತಾರೆ ಎನ್ನುವ ಶಂಕೆಯಿಂದ ಬಸವರಾಜನನ್ನು ಮನೆಯಿಂದ ಹೊರಗೆ ಬಿಡುತ್ತಿರಲಿಲ್ಲ. ಆದರೂ ಮನೆಯವರ ಮಾತು ಕೇಳದೆ ಬಸವರಾಜ ಕೂಲಿ ಕೆಲಸ ಮಾಡಿ ಬರುತ್ತಿದ್ದ. ಮನೆಯಲ್ಲಿ ಆತನನ್ನು ಕೂಡಿಹಾಕಿ ಹೊಡೆದು ಕೊಲೆ ಮಾಡಿದ್ದಾರೆ ಎಂದು ದೂರು ನೀಡಲಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular