HomeKarnatakaಒಂದೇ ಆಸ್ತಿ ಒತ್ತೆ ಇಟ್ಟು 22 ಬ್ಯಾಂಕ್ ಗಳಲ್ಲಿ ಸಾಲ: ದಂಪತಿ ಸೇರಿ 6 ಮಂದಿ...

ಒಂದೇ ಆಸ್ತಿ ಒತ್ತೆ ಇಟ್ಟು 22 ಬ್ಯಾಂಕ್ ಗಳಲ್ಲಿ ಸಾಲ: ದಂಪತಿ ಸೇರಿ 6 ಮಂದಿ ಅರೆಸ್ಟ್

ಬೆಂಗಳೂರು: ಒಂದೇ ಆಸ್ತಿ ಒತ್ತೆ ಇಟ್ಟು 22 ಬ್ಯಾಂಕುಗಳಲ್ಲಿ ಸಾಲ ಪಡೆದುಕೊಂಡು 10 ಕೋಟಿ ರೂ.ಗೂ ಅಧಿಕ ಹಣ ವಂಚಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಒಂದೇ ಆಸ್ತಿಗೆ ಹತ್ತಾರು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದು, 22 ಬ್ಯಾಂಕಗಳಿಂದ 10 ಕೋಟಿ ರೂಪಾಯಿಗೂ ಅಧಿಕ ಹಣ ಪಡೆದುಕೊಳ್ಳಲಾಗಿದೆ. ಈ ರೀತಿ ವಂಚಿಸಿದ ಒಂದೇ ಕುಟುಂಬದ ಐವರು ಸೇರಿದಂತೆ ಆರು ಮಂದಿಯನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಾಗೇಶ್ ಭಾರದ್ವಾಜ್, ಆತನ ಪತ್ನಿ ಸುಮಾ ಸಂಬಂಧಿಕರಾದ ಶೋಭಾ, ಶೇಷಗಿರಿ, ಸತೀಶ, ಸುಮಾ ಸ್ನೇಹಿತೆ ವೇದಾ ಬಂಧಿತರು. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರು, ಬೇಗೂರು ಗ್ರಾಮದಲ್ಲಿ ನಾಗೇಶ್ ಮತ್ತು ಸುಮಾ ದಂಪತಿ ಹೆಸರಿನಲ್ಲಿ 2100 ಚದರಡಿ ಜಾಗವಿದ್ದು, ಕಟ್ಟಡ ದಾಖಲೆಯಲ್ಲಿ ವಿವಿಧ ಸರ್ವೇ ನಂಬರ್, ವಿವಿಧ ನಿವೇಶನಗಳ ನಂಬರ್ ಗಳನ್ನು ನಮೂದಿಸುತ್ತಿದ್ದರು. ಸೈಟ್ ಉದ್ದಳತೆಯನ್ನು ಬದಲಾಯಿಸಿದ್ದರು. ನಂತರ ನಕಲಿ ದಾಖಲಾತಿಗಳನ್ನು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಸುತ್ತಿದ್ದರು. ಅವುಗಳ ಆಧಾರದ ಮೇಲೆ ವಿವಿಧ ರಾಷ್ಟ್ರೀಕೃತ ಬ್ಯಾಂಕು, ಸಹಕಾರಿ ಬ್ಯಾಂಕು, ಕೋ ಆಪರೇಟಿವ್ ಬ್ಯಾಂಕುಗಳು ಸೇರಿ ಒಟ್ಟು 22 ಬ್ಯಾಂಕ್ ಗಳಲ್ಲಿ 10 ಕೋಟಿ ರೂ.ಗೂ ಅಧಿಕ ಸಾಲ ಪಡೆದುಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಯನಗರ ಎರಡನೇ ಬ್ಲಾಕ್ ನಲ್ಲಿರುವ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ನಾಗೇಶ್ ನಿವೇಶನ, ಕಟ್ಟಡದ ನಕಲಿ ದಾಖಲೆ ಆಧಾರದಲ್ಲಿ ಸಾಲ, ಯಂತ್ರೋಪಕರಣಕ್ಕೆ 1.30 ಕೋಟಿ ಸಾಲ ಪಡೆದುಕೊಂಡಿದ್ದರು. ಹಣವನ್ನು ಬ್ಯಾಂಕಿಗೆ ಮರು ಪಾವತಿಸದೆ ವಂಚಿಸಿದ್ದರು. ಬ್ಯಾಂಕಿನ ಮ್ಯಾನೇಜರ್ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಂಡ ಪೊಲೀಸರು ದಂಪತಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ನಕಲಿ ದಾಖಲೆ ಸೃಷ್ಟಿಸಿ ವಿವಿಧ ಬ್ಯಾಂಕುಗಳಲ್ಲಿ ಸಾಲ ಪಡೆದಿರುವುದು ಗೊತ್ತಾಗಿದೆ. ಇವರು ನೀಡಿದ ಮಾಹಿತಿ ಆಧರಿಸಿ ಮತ್ತೆ ನಾಲ್ವರನ್ನು ಬಂಧಿಸಲಾಗಿದೆ. ತನಿಖೆ ಮುಂದುವರೆದಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular