ಎಲ್ಲಾ ಆಸ್ತಿ ತನ್ನ ಹೆಸರಿಗೆ ಬರೆಸಿಕೊಂಡ ಅಣ್ಣ: ಜಮೀನಿನಲ್ಲಿ ಪಾಲು ಕೇಳಿದ್ದಕ್ಕೆ ತಮ್ಮನ ಕುಟುಂಬದವರ ಮೇಲೆ ಹಲ್ಲೆ

ಬೆಳಗಾವಿ: ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಅಲಕನೂರು ಬಳಿ ಜಮೀನಿನಲ್ಲಿ ಬಾಲು ಕೇಳಿದ್ದಕ್ಕೆ ತಮ್ಮನ ಕುಟುಂಬದ ಮೇಲೆ ಹಲ್ಲೆ ನಡೆಸಲಾಗಿದೆ.

ಅಲಕನೂರು ಗ್ರಾಮದ ಹೊರವಲಯದ ಜಮೀನಿನಲ್ಲಿ ಘಟನೆ ನಡೆದಿದೆ. ಅಣ್ಣ ಕರೆಪ್ಪ ಎಲ್ಲ ಜಮೀನು ತನ್ನ ಹೆಸರಿಗೆ ಮಾಡಿಕೊಂಡ ಆರೋಪವಿದ್ದು, ಆಸ್ತಿಯನ್ನು ತಮ್ಮ ಹೆಸರಿಗೆ ಮಾಡುವಂತೆ ಅಣ್ಣನಿಗೆ ಕರೆಪ್ಪನ ತಮ್ಮ ಗೋಪಾಲ ಕೇಳಿದ್ದಾರೆ.

ಗೋಪಾಲ ಮತ್ತು ಮಕ್ಕಳು ಆಸ್ತಿ ಪಾಲು ಕೇಳಿದ್ದು, ಜಮೀನಿನ ಬಳಿ ಗಲಾಟೆಯಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಗೋಪಾಲ ಮಾಂಗ, ಶೈನಪ್ಪ ಮಾಂಗ, ಆನಂದ್ ಮಾಂಗ, ಕುಲಾಬಾಯಿ ಮಾಂಗ, ಬಸವರಾಜ ಮಾಂಗ ಎಂಬುವರ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆಗೊಳಗಾದವರನ್ನು ಹಾರೂಗೇರಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕರೆಪ್ಪ ಮತ್ತು ಮಕ್ಕಳು ಮಾರಣಾಂತಿಕ ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿದೆ. ನಾಪತ್ತೆಯಾದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read