HomeLatest NewsBIG NEWS : 'ಮದ್ಯ' ಮಾರಾಟಕ್ಕೆ ‘ವಯಸ್ಸಿನ ಪುರಾವೆ’ ಕಡ್ಡಾಯ ; ಬಾರ್ ಮಾಲೀಕರಿಗೆ ಹೈಕೋರ್ಟ್...

BIG NEWS : ‘ಮದ್ಯ’ ಮಾರಾಟಕ್ಕೆ ‘ವಯಸ್ಸಿನ ಪುರಾವೆ’ ಕಡ್ಡಾಯ ; ಬಾರ್ ಮಾಲೀಕರಿಗೆ ಹೈಕೋರ್ಟ್ ಖಡಕ್ ಸೂಚನೆ.!

ಬೆಂಗಳೂರು :   ಇನ್ನು ಮುಂದೆ ಮದ್ಯದ ಅಂಗಡಿ ಅಥವಾ ಬಾರ್‌ಗಳಿಗೆ ಹೋದಾಗ ವಯಸ್ಸಿನ ಪುರಾವೆ (ID Proof) ತೋರಿಸುವುದು ಕಡ್ಡಾಯವಾಗಲಿದೆ. ಇದು ಕೇವಲ ಕಾನೂನಲ್ಲ, ವ್ಯಾಪಾರಿಗಳ ಮೇಲಿನ ದೊಡ್ಡ ಜವಾಬ್ದಾರಿ. ಈ ಹಿಂದೆ ಅಪ್ರಾಪ್ತರು ಮದ್ಯ ಸೇವಿಸಿದರೆ ಕೇವಲ ಸಿಬ್ಬಂದಿಯನ್ನು ದೂಷಿಸಲಾಗುತ್ತಿತ್ತು. ಆದರೆ ಈಗ ಹೈಕೋರ್ಟ್, ಸಂಸ್ಥೆಯ ಮಾಲೀಕರು ಅಥವಾ ಆಡಳಿತ ಮಂಡಳಿಯನ್ನೇ ನೇರವಾಗಿ ಹೊಣೆಗಾರರನ್ನಾಗಿ ಮಾಡಿದೆ. ಇದು ಮದ್ಯ ಮಾರಾಟ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ತರಲಿದೆ.

ಹೌದು.   ಬ್ರೇವರಿಸ್ ಮತ್ತು ಅಂತಹದೇ ಮದ್ಯ ಮಾರಾಟ ಸಂಸ್ಥೆಗಳು ತನ್ನಲ್ಲಿಗೆ ಬರುವವರ ವಯಸ್ಸನ್ನು ಕಡ್ಡಾಯವಾಗಿ ಆಧಾರ್ ಅಥವಾ ಇತರ ಅಧಿಕೃತ ಗುರುತು ಚೀಟಿಗಳ ಮೂಲಕ ಪರಿಶೀಲಿಸಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ.

ಬೆಂಗಳೂರಿನ ಲೆಗಸಿ ಬ್ರೂಯಿಂಗ್ ಕಂಪನಿಯಲ್ಲಿ 15 ವರ್ಷದ ಶಾಲಾ ವಿದ್ಯಾರ್ಥಿಯೊಬ್ಬ ಮದ್ಯ ಸೇವಿಸಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆದೇಶ ಹೊರಬಿದ್ದಿದೆ.ಈ ಪ್ರಕರಣದಲ್ಲಿ ಕಂಪನಿಯ ಪಾಲುದಾರ ವಿ. ಚಿಟ್ಟಿಬಾಬು ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಲು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ನಿರಾಕರಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೈಕೋರ್ಟ್ ಆದೇಶ..!

ವಯಸ್ಸಿನ ಪರಿಶೀಲನೆ: ಮದ್ಯದ ಮಳಿಗೆಗಳಿಗೆ ಬರುವ ಗ್ರಾಹಕರ ವಯಸ್ಸನ್ನು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು. ಇದನ್ನು ಕೇವಲ ‘ಕಾಟಾಚಾರ’ಕ್ಕೆ ಮಾಡಬಾರದು.

ಎಚ್ಚರಿಕೆ ಫಲಕ: “ಅಪ್ರಾಪ್ತರಿಗೆ ಮದ್ಯ ಸರಬರಾಜು ಮಾಡಲಾಗುವುದಿಲ್ಲ” ಎಂಬ ಎಚ್ಚರಿಕೆ ಫಲಕಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು.

ಆಡಳಿತ ಮಂಡಳಿ ಹೊಣೆ: ಅಪ್ರಾಪ್ತರಿಗೆ ಮದ್ಯ ನೀಡುವಲ್ಲಿ ಆಡಳಿತ ಮಂಡಳಿಯ ಉದಾಸೀನತೆ ಕಂಡುಬಂದರೆ ಅವರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು.

ನೈತಿಕ ಜವಾಬ್ದಾರಿ: ಯುವಕರ ರಕ್ಷಣೆ ಕೇವಲ ಶಾಸನಬದ್ಧ ಕರ್ತವ್ಯವಲ್ಲ, ಅದು ನೈತಿಕವಾಗಿ ಕಡ್ಡಾಯವಾಗಿದೆ ಎಂದು ಪೀಠ ಎಚ್ಚರಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular