ಬೆಂಗಳೂರು: ಸರ್ಕಾರಿ ಪ್ರೌಢಶಾಲೆಗಳ ಸಹ ಶಿಕ್ಷಕರಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡಲು ಅರ್ಹತಾ ಪರೀಕ್ಷೆ ನಿಗದಿಪಡಿಸಿದ್ದು, ಮೇ 26 ರಿಂದ ಅರ್ಹತಾ ಪರೀಕ್ಷೆ ನಡೆಯಲಿದೆ.
ಮೇ 26ರಂದು ಬೆಳಿಗ್ಗೆ ಕನ್ನಡ, ಉರ್ದು, ಗಣಿತ, ಜೀವವಿಜ್ಞಾನ, ಮಧ್ಯಾಹ್ನ ಇಂಗ್ಲಿಷ್, ಸಂಸ್ಕೃತ ವಿಷಯದ ಪರೀಕ್ಷೆಗಳು ನಡೆಯಲಿವೆ.
ಮೇ 27ರಂದು ಬೆಳಿಗ್ಗೆ ಇತಿಹಾಸ, ಮಧ್ಯಾಹ್ನ ಹಿಂದಿ ಪರೀಕ್ಷೆ ನಡೆಯಲಿದೆ.
ಮೇ 29ರಂದು ಬೆಳಿಗ್ಗೆ ಅರ್ಥಶಾಸ್ತ್ರ, ಮಧ್ಯಾಹ್ನ ರಾಜ್ಯಶಾಸ್ತ್ರ
ಮೇ 30ರಂದು ಬೆಳಿಗ್ಗೆ ಸಮಾಜಶಾಸ್ತ್ರ, ಮಧ್ಯಾಹ್ನ ಭೂಗೋಳಶಾಸ್ತ್ರ ವಿಷಯಗಳ ಪರೀಕ್ಷೆಗಳು ನಡೆಯಲಿವೆ.
ಜನಗಣತಿ ಕಾರಣದಿಂದ ಶಿಕ್ಷಕರ ಬಡ್ತಿಯ ಅರ್ಹತಾ ಪರೀಕ್ಷೆ ಮುಂದೂಡಲಾಗಿತ್ತು. ಈಗ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ ವೆಬ್ಸೈಟ್ ನಿಂದ(https://sts.karnataka.gov.in/GPSTRNHK) ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

