HomeLive Newsಪ್ರೊ ಕಬಡ್ಡಿ 2023; ಇಂದು ಜೈಪುರ್ ಪಿಂಕ್ ಪ್ಯಾಂಥರ್ಸ್ ಹಾಗೂ ಗುಜರಾತ್ ಜೈಂಟ್ಸ್ ಮುಖಾಮುಖಿ

ಪ್ರೊ ಕಬಡ್ಡಿ 2023; ಇಂದು ಜೈಪುರ್ ಪಿಂಕ್ ಪ್ಯಾಂಥರ್ಸ್ ಹಾಗೂ ಗುಜರಾತ್ ಜೈಂಟ್ಸ್ ಮುಖಾಮುಖಿ

ಇಂದು ಪ್ರೊ ಕಬಡ್ಡಿಯ 18ನೇ ಪಂದ್ಯದಲ್ಲಿ ಡಿಪೆಂಡಿಂಗ್ ಚಾಂಪಿಯನ್ ಜೈಪುರ್ ಪಿಂಕ್ ಪ್ಯಾಂಥರ್ಸ್ ಹಾಗೂ ಗುಜರಾತ್ ಜೈಂಟ್ಸ್ ಮುಖಾಮುಖಿಯಾಗುತ್ತಿವೆ. ಕಳೆದ ಪ್ರೊ ಕಬಡ್ಡಿ ಯಲ್ಲಿ ಪುಣೆರಿ ಪಲ್ಟಾನ್ ತಂಡದ ನಾಯಕನಾಗಿದ್ದ ಫಜೆಲ್ ಸುಲ್ತಾನ್ ಅಟ್ರಾಚಲಿ ಫೈನಲ್ ನಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡದ ಎದುರು ಕೆಲವೇ ಅಂತರದಲ್ಲಿ ಸೋಲುನುಭವಿಸಿದ್ದರು, ಈ ಬಾರಿ  ಗುಜರಾತ್ ಜೆಂಟ್ಸ್ ತಂಡದ ನಾಯಕನಾಗಿದ್ದು, ಸೇಡನ್ನು ತೀರಿಸಿಕೊಳ್ಳಲು ಸಜ್ಜಾಗಿದ್ದಾರೆ.

ಗುಜರಾತ್ ಜೈಂಟ್ಸ್ ಡಿಪೆಂಡಿಂಗ್ ನಲ್ಲಿ ತುಂಬಾ ಬಲಿಷ್ಠವಾಗಿದ್ದು, ಫಜೆಲ್ ಸುಲ್ತಾನ್ ತಮ್ಮ ಆಟಗಾರರಿಗೆ ಕಿವಿ ಮಾತನ್ನು ಹೇಳುವ ಮೂಲಕ ತಮ್ಮ ತಂಡದ ಗೆಲುವಿಗೆ ಪಾತ್ರರಾಗುತ್ತಿದ್ದಾರೆ. ಜೈಪುರ್ ಪಿಂಕ್ ಪ್ಯಾಂಥರ್ಸ್ ನ ರೈಡರ್ ಅರ್ಜುನ್ ದೇಶವಾಲ್ ಅವರನ್ನು ಇಂದು ಯಾವ ರೀತಿ ಟ್ಯಾಕಲ್ ಮಾಡಲಿದ್ದಾರೆ ಕಾದು ನೋಡಬೇಕಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular