HomeLive Newsಪ್ರೊ ಕಬಡ್ಡಿ; ಇಂದು ದಬಾಂಗ್ ಡೆಲ್ಲಿ ಮತ್ತು ತಮಿಳ್ ತಲೈವಾಸ್ ಮುಖಾಮುಖಿ

ಪ್ರೊ ಕಬಡ್ಡಿ; ಇಂದು ದಬಾಂಗ್ ಡೆಲ್ಲಿ ಮತ್ತು ತಮಿಳ್ ತಲೈವಾಸ್ ಮುಖಾಮುಖಿ

ಪ್ರೊ ಕಬಡ್ಡಿ ಪಂದ್ಯಗಳು ಪ್ರತಿದಿನ ಭರ್ಜರಿ ಮನರಂಜನೆ ನೀಡುತ್ತಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಎಲಿಮಿನೇಟರ್ ಪಂದ್ಯಗಳು ಆರಂಭವಾಗಲಿವೆ. ಈಗಾಗಲೇ ಅಭಿಷೇಕ್ ಬಚ್ಚನ್ ಮಾಲಿಕತ್ವದ ಜೈಪುರ್ ಪಿಂಕ್ ಪ್ಯಾಂಥರ್ಸ್ ಸೇರಿದಂತೆ ಐದು ತಂಡಗಳು ಪ್ಲೇ ಆಫ್ ಸ್ಥಾನವನ್ನು ಭದ್ರಪಡಿಸಿಕೊಂಡಿವೆ. ಹರಿಯಾಣ ಸ್ಟೀಲರ್ಸ್ ತಂಡ ಇನ್ನು ಕೇವಲ ಒಂದು ಪದ್ಯವನ್ನು ಗೆದ್ದರೆ ಪ್ಲೇ ಆಫ್ ಗೆ ಎಂಟ್ರಿ ಕೊಡಲಿದೆ.

ಇಂದು ಪ್ರೊ ಕಬಡ್ಡಿ ಮೊದಲ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಮತ್ತು ತಮಿಳ್ ತಲೈವಾಸ್ ಮುಖಮುಖಿಯಾಗಲಿವೆ. ಪ್ಲೇ ಆಫ್ ಅವಕಾಶವನ್ನು ಈಗಾಗಲೇ ಕಳೆದುಕೊಂಡಿರುವ ತಮಿಳ್ ತಲೈವಾಸ್ ತನ್ನ ಪ್ರತಿಷ್ಠೆಗಾಗಿ  ಈ ಪಂದ್ಯದಲ್ಲಿ ಜಯ ಕಾಣಲು ನೋಡುತ್ತಿದ್ದಾರೆ. ಮತ್ತೊಂದು ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಹಾಗೂ ಪುಣೆರಿ ಪಲ್ಟನ್ ಸೆಣಸಾಡಲಿದ್ದು, ಬೆಂಗಾಲ್ ವಾರಿಯರ್ಸ್ ತನ್ನ ಓಂ ಗ್ರೌಂಡ್ ನಲ್ಲಿ ಮತ್ತೊಮ್ಮೆ ಜಯಭೇರಿ ಆಗುವ ಲೆಕ್ಕಾಚಾರದಲ್ಲಿದೆ.

For Latest News Updates, Join Our Whatsapp Community🚩
RELATED ARTICLES

Most Popular