HomeKarnatakaನಮ್ಮ ನೆಲ, ಜಲ, ಭಾಷೆ ವಿಚಾರ ಬಂದಾಗ ನಾವು ಹಿಂದೆ ಸರಿಯುವ ಮಾತೇ ಇಲ್ಲ: ಎಂಇಎಸ್...

ನಮ್ಮ ನೆಲ, ಜಲ, ಭಾಷೆ ವಿಚಾರ ಬಂದಾಗ ನಾವು ಹಿಂದೆ ಸರಿಯುವ ಮಾತೇ ಇಲ್ಲ: ಎಂಇಎಸ್ ಗೆ ಪ್ರಿಯಾಂಕ್ ಖರ್ಗೆ ಎಚ್ಚರಿಕೆ

ಬೆಂಗಳೂರು: ಮಹಾರಾಷ್ಟ್ರ ಏಕೀಕರಣ ಸಮಿತಿ-ಎಂಇಎ ಸಂಘಟನೆಗೆ ಕಾನೂನು ನೆರವು ನೀಡುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರಕ್ಕೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ನಮ್ಮ ನೆಲ, ಜಲ, ಭಾಷೆ ವಿಚಾರ ಬಂದಾಗ ನಾವು ಹಿಂದೆ ಸರಿಯುವುದಿಲ್ಲ. ಮಹಾರಾಷ್ಟ್ರ, ಗೋವಾ, ತಮಿಳುನಾಡು, ಆಂಧ್ರ ಯಾರೇ ಇರಬಹುದು. ಏನೇ ಗಡಿ ವಿಚಾರ ಇದ್ರೂ ಕಾನೂನಾತ್ಮಕವಾಗಿ ಹೋರಾಟ ಮಾಡಬೇಕು ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯಾವುದೋ ಸಂಘಟನೆಯವರು ಹೇಳ್ತಾರೆ, ಮುಖ್ಯಮಂತ್ರಿ ಹೇಳುತ್ತಾರೆ ಎಂದು ಬೇಕಾದ ರೀತಿ ಅಡ್ಡಾದಿಡ್ಡಿ ಗೆರೆ ಎಳೆಯೋಕೆ ಬರಲ್ಲ. ಇದನ್ನು ಎಚ್ಚರಿಕೆ ಎಂದಾದರೂ ತಿಳಿದುಕೊಳ್ಳಲಿ ಅಥವಾ ಮನವಿ ಅಂತಾದರೂ ತಿಳಿದುಕೊಳ್ಳಲಿ. ನಮ್ಮ ರಾಜ್ಯದಲ್ಲಿ ಬಂದು ಪುಂಡಾಟಿಕೆ ಮಾಡೋದು, ಘಟರ್ಷಣೆ ನಡೆಸೋದಕ್ಕೆ ಆಸ್ಪದ ನೀಡಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular