HomeKarnatakaBREAKING NEWS: ಮತ್ತೆ ಹುಚ್ಚಾಟ ಮೆರೆದ ಪೃಥ್ವಿರಾಜ್: ತಾಲೂಕು ಕಚೇರಿ ಬಳಿ ತಹಶೀಲ್ದಾರ್ ಜೀಪ್ ಗೆ...

BREAKING NEWS: ಮತ್ತೆ ಹುಚ್ಚಾಟ ಮೆರೆದ ಪೃಥ್ವಿರಾಜ್: ತಾಲೂಕು ಕಚೇರಿ ಬಳಿ ತಹಶೀಲ್ದಾರ್ ಜೀಪ್ ಗೆ ಬೆಂಕಿಯಿಟ್ಟ ಕಿಡಿಗೇಡಿ

ಚಿತ್ರದುರ್ಗ: ಕೆಲ ದಿನಗಳ ಹಿಂದೆ ವಿಡಿಯೋ ಹರಿಬಿಟ್ಟು ಬಾಂಬ್ ಬೆದರಿಕೆ ಹಾಕಿದ್ದ, ವಿಧಾನಸೌಧದ ಬಳಿ ಬೈಕ್ ಗೆ ಬೆಂಕಿ ಇಟ್ಟಿದ್ದ ಕಿಡಿಗೇಡಿ ಪೃಥ್ವಿರಾಜ್ ಇದೀಗ ಮತ್ತೆ ಹುಚ್ಚಾಟ ಮೆರೆದಿದ್ದಾನೆ.

ತಹಶೀಲ್ದಾರ್ ಜೀಪ್ ಗೆ ಬೆಂಕಿ ಹಚ್ಚಿದ್ದಾನೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕು ಕಚೇರಿ ಬಳಿ ಪೃಥ್ವಿರಾಜ್, ತಹಶೀಲ್ದಾರ್ ಜೀಪ್ ಗೆ ಬೆಂಕಿ ಹಚ್ಚಿದ್ದಾನೆ. ತಕ್ಷಣ ಆತನನ್ನು ಹಿಡಿದ ಸ್ಥಳೀಯರು ಪೃಥಿರಾಜ್ ನನ್ನು ಥಳಿಸಿ ಚಳ್ಳಕೆರೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ನಾಪತ್ತೆ ಪ್ರಕರಣ ದಾಖಲಿಸಲು ಹೋದಾಗ ಚಳ್ಳಕೆರೆ ಪೊಲೀಸರು ತನ್ನ ತಾಯಿಯನ್ನು ನಿಂದಿಸಿದ್ದಾರೆ ಎಂದು ಆರೋಪಿಸಿ ಕೆಲ ದಿನಗಳ ಹಿಂದೆ ವಿಡಿಯೋ ಹರಿಬಿಟ್ಟು ತಾನು ಟೆರರಿಸ್ಟ್ ಆಗುತ್ತೇನೆ ಬಾಂಬ್ ಸ್ಫೋಟಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ. ಈ ಘಟನೆ ಬಳಿಕ ಆತನನ್ನು ಬಂಧಿಸಿದ್ದ ಪೊಲೀಸರು ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡು ಬಿಟ್ಟಿದ್ದರು. ಬಳಿಕ ವಿಧಾನಸೌಧದ ಬಳಿ ಬೈಕ್ ಗಳಿಗೆ ಬೆಂಕಿ ಇಟ್ಟು ದುಷ್ಕೃತ್ಯವೆಸಗಿದ್ದ. ಇದೀಗ ತಹಶೀಲ್ದಾರ್ ಕಚೇರಿ ಬಳಿ ತಹಶೀಲ್ದಾರ್ ಜೀಪ್ ಗೆ ಬೆಂಕಿ ಇಟ್ಟು ಹುಚ್ಚಾಟ ಮೆರೆದಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular