HomeEntertainmentಫೆಬ್ರವರಿ 23 ರಂದು ರಾಜ್ಯದ್ಯಂತ ತೆರೆ ಮೇಲೆ ಬರಲಿದೆ ಪೃಥ್ವಿ ಅಂಬಾರ್ ಅಭಿನಯದ 'ಮತ್ಸ್ಯಗಂಧ'

ಫೆಬ್ರವರಿ 23 ರಂದು ರಾಜ್ಯದ್ಯಂತ ತೆರೆ ಮೇಲೆ ಬರಲಿದೆ ಪೃಥ್ವಿ ಅಂಬಾರ್ ಅಭಿನಯದ ‘ಮತ್ಸ್ಯಗಂಧ’

ದೇವರಾಜ್ ಪೂಜಾರಿ ನಿರ್ದೇಶನದ ಪೃಥ್ವಿ ಅಂಬಾರ್ ಅಭಿನಯದ ‘ಮತ್ಸ್ಯಗಂಧ’ ಚಿತ್ರ ಫೆಬ್ರವರಿ 23 ರಂದು ರಾಜ್ಯದ್ಯಂತ ತೆರೆ ಕಾಣಲಿದೆ ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದೆ. ಈಗಾಗಲೇ ಸಾಕಷ್ಟು ನಿರೀಕ್ಷೆ ಮಾಡಿಸಿರುವ  ಈ ಸಿನಿಮಾದಲ್ಲಿ ಕರಾವಳಿ ಮೀನುಗಾರರ ಸಂಪ್ರದಾಯ ಹಾಗೂ ಹೋರಾಟವನ್ನು ತೋರಿಸಲಾಗಿದೆ.

ಈ ಚಿತ್ರದಲ್ಲಿ ಪೃಥ್ವಿ ಅಂಬಾರ್ ಖಡಕ್ ಪೊಲೀಸ್ ಆಫೀಸರ್  ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಭಜರಂಗಿ ಲೋಕಿ, ಶರತ್ ಲೋಹಿತಾಶ್ವ, ಪ್ರಶಾಂತ್ ಸಿದ್ಧಿ, ನಾಗರಾಜ್ ಬೈಂದೂರ್, ಅಶೋಕ್ ಹೆಗಡೆ, ಸತೀಶ್ ಚಂದ್ರ, ಧಿಶಾ ಶೆಟ್ಟಿ, ಅಂಜಲಿ ಪಾಂಡೆ, ಪ್ರತಿಮಾ ನಾಯಕ್, ಗೌತಮ್, ದೀಪಾ ಶ್ರೀನಿವಾಸ್, ಕಾಂತರಾಜ್ ಕಡ್ಡಿಪುಡಿ, ಸೇರಿದಂತೆ ಹಲವರ ತಾರಬಳಗವಿದೆ.

ಸಹ್ಯಾದ್ರಿ ಪ್ರೊಡಕ್ಷನ್ ಬ್ಯಾನರ್ ನಡಿ ವಿಶ್ವನಾಥ್ ನಿರ್ಮಾಣ ಮಾಡಿದ್ದಾರೆ. ಶ್ರೀನಿವಾಸ್ ಸಂಕಲನ, ಪ್ರವೀಣ್ ಛಾಯಾಗ್ರಹಣ, ಪ್ರಶಾಂತ್ ಸಿದ್ದಿ ಸಂಗೀತ ಸಂಯೋಜನೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular