HomeLatest NewsBIG NEWS: ಯುವತಿಯನ್ನು ಮಂಚಕ್ಕೆ ಕರೆದ ಕಾಮುಕ ಪ್ರಾಂಶುಪಾಲ ಅರೆಸ್ಟ್

BIG NEWS: ಯುವತಿಯನ್ನು ಮಂಚಕ್ಕೆ ಕರೆದ ಕಾಮುಕ ಪ್ರಾಂಶುಪಾಲ ಅರೆಸ್ಟ್

ತುಮಕೂರು: ಯುವತಿಯನ್ನು ಮಂಚಕ್ಕೆ ಕರೆದ ಕಾಮುಕ ಪ್ರಾಂಶುಪಾಲನೊಬ್ಬನನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ.

ಯೋಗೇಶ್ ಬಂಧಿತ ಪ್ರಾಂಶುಪಾಲ. ತುಮಕೂರಿನ ಜಯನಗರದಲ್ಲಿರುವ ಖಾಸಗಿ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಇದಕ್ಕೂ ಮುನ್ನ 2019ರಲ್ಲಿ ತುಮಕೂರಿನ ಬಾರ್ ಲೈನ್ ರಸ್ತೆಯಲ್ಲಿರುವ ಖಾಸಗಿ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕನಾಗಿದ್ದ. ಈ ವೇಳೆ ಕಾಲೇಜು ವಿದ್ಯಾರ್ಥಿನಿಯೊಬ್ಬಳ ನಂಬರ್ ಪಡೆದು ಅಶ್ಲೀಲವಾಗಿ ಸಂದೇಶ ಕಳುಹಿಸುತ್ತಿದ್ದ. ಯುವತಿ ಕಾಲೇಜು ಬಿಟ್ಟರೂ ಯೋಗೇಶ್ ಕಿರುಕುಳ ಮುಂದುವರೆದಿತ್ತು. ಯುವತಿ ಯೋಗೇಶ್ ನಂಬರ್ ಬ್ಲಾಕ್ ಮಾಡಿದ್ದಳು. ಬಳಿಕ ಸೈಲೆಂಟ್ ಆಗಿದ್ದ ಯೋಗೇಶ್ ಜುಲೈ 22ರಂದು ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಯನ್ನು ನೋಡಿ ಮತ್ತೆ ಬೇರೊಂದು ನಂಬರ್ ನಿಂದ ಅಶ್ಲೀಲವಾಗಿ ಸಂದೇಶ ರವಾನಿಸಲಾರಂಭಿಸಿದ್ದಾನೆ.

ಅಲ್ಲದೇ ನನಗೆ ನೀನು ಬೇಕು 10 ಸಾವಿರ ಹಣ ಕೊಡ್ತೀನಿ ಬಾ ಎಂದು ಮಂಚಕ್ಕೆ ಕರೆದಿದ್ದಾನೆ. ಪ್ರಾಂಶುಪಾಲನ ಕಿರುಕುಳದಿಂದ ನೊಂದ ಯುವತಿ ತನ್ನ ತಂದೆಗೆ ತಿಳಿಸಿದ್ದಾಳೆ. ಬಳಿಕ ತುಮಕೂರು ಮಹಿಳಾ ಠಾಣೆಗೆ ದೂರು ನೀಡಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರೋಪಿ ವಿರುದ್ಧ ಲೈಂಗಿಕ ಕಿರುಕುಳ, ಅಟ್ರಾಸಿಟಿ ಕೇಸ್ ಅಡಿ ಎಫ್ಐಆರ್ ದಾಖಲಿಸಿರುವ ಪೊಲೀಸರು ಕಾಮುಕ ಪ್ರಾಂಶುಪಾಲನನ್ನು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular