ನವದೆಹಲಿ : ಇಂದು ದೇಶಾದ್ಯಂತ ಗಣರಾಜ್ಯೋತ್ಸವದ ಸಂಭ್ರಮ. ಈ ಹಿನ್ನೆಲೆ ಪ್ರಧಾನಿ ಮೋದಿ ಅವರು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.
ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ ಪ್ರಧಾನಿ ಮೋದಿ ‘ನಮ್ಮ ವಿಕಸಿತ ಭಾರತವನ್ನು ನಿರ್ಮಿಸುವ ಸಾಮೂಹಿಕ ಸಂಕಲ್ಪಕ್ಕೆ ಈ ಸಂದರ್ಭವು ಹೊಸ ಶಕ್ತಿ ಮತ್ತು ಉತ್ಸಾಹವನ್ನು ತುಂಬಲಿ.”ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ 77ನೇ ಗಣರಾಜ್ಯೋತ್ಸವದ ಶುಭಾಶಯಗಳು! ಈ ದಿನವು ನಮ್ಮ ದೇಶದ ಏಕತೆ ಮತ್ತು ಪ್ರಗತಿಯನ್ನು ಮತ್ತಷ್ಟು ಬಲಪಡಿಸಲಿ’ ಎಂದು ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಶ್ಲೋಕ ಸಂದೇಶ
”ಪರತಂತ್ರದಲ್ಲಿರುವ (ಬೇರೆಯವರ ಅಧೀನದಲ್ಲಿರುವ) ದೇಶವು ಅಭಿವೃದ್ಧಿ ಅಥವಾ ಪ್ರಗತಿಯನ್ನು ಕಾಣಲು ಹೇಗೆ ಸಾಧ್ಯ? ಅಸಾಧ್ಯ. ಆದ್ದರಿಂದಲೇ ನಾವು ಸ್ವಾತಂತ್ರ್ಯವನ್ನು ಪಡೆಯಲೇಬೇಕು. ಆ ಸ್ವಾತಂತ್ರ್ಯವನ್ನು ಗಳಿಸಲು ಅಥವಾ ಉಳಿಸಿಕೊಳ್ಳಲು ‘ಒಗ್ಗಟ್ಟು’ (ಐಕ್ಯತೆ) ಎಂಬುದು ಅತ್ಯಂತ ಪ್ರಮುಖವಾದ ಅಸ್ತ್ರ ಅಥವಾ ಸಾಧನವಾಗಿದೆ” ಎಂದಿದ್ದಾರೆ.

