HomeEntertainment'ಇಬ್ಬನಿ ತಬ್ಬಿದ ಇಳೆಯಲಿ' ಚಿತ್ರದ ''ಪ್ರೀತಿ ಇದ್ದ ಮೇಲೆ'' ಹಾಡು ರಿಲೀಸ್

‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದ ”ಪ್ರೀತಿ ಇದ್ದ ಮೇಲೆ” ಹಾಡು ರಿಲೀಸ್

ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನದ ಚಿತ್ರ ಮ್ಯಾಜಿಕಲ್ ಬ್ಲಾಕ್ ಬಸ್ಟರ್ ಆಗಿದ್ದು, ಮೂರು ವಾರಗಳನ್ನು ಪೂರೈಸಿ ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ಈ ಚಿತ್ರದ ಹಾಡುಗಳು ದೊಡ್ಡ ಮಟ್ಟಿಗೆ ಯಶಸ್ಸು ಕಂಡಿದ್ದು, ಗಾನಪ್ರಿಯರ ಗಮನ ಸೆಳೆದಿವೆ ಇದೀಗ ಆರನೇ ಹಾಡನ್ನು ಪರಂವ ಸ್ಟುಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ.  ‘ಪ್ರೀತಿ ಇದ್ದಮೇಲೆ’ ಎಂಬ ಈ ಹಾಡಿಗೆ ರಜತ್ ಹೆಗಡೆ ಧ್ವನಿಯಾಗಿದ್ದು, ಗಗನ್ ಬದರಿಯಾ ಸಂಗೀತ ಸಂಯೋಜನೆ  ನೀಡಿದ್ದಾರೆ. ಇನ್ನುಳಿದಂತೆ ನಿರ್ದೇಶಕ ಚಂದ್ರಜಿತ್ ಬೆಳ್ಳಿಯಪ್ಪ ಅವರ ಸಾಹಿತ್ಯವಿದೆ.

ಈ ಚಿತ್ರದಲ್ಲಿ ವಿಹಾನ್, ಅಂಕಿತ ಅಮರ್ ಸೇರಿದಂತೆ ಗಿರಿಜಾ ಶೆಟ್ಟರ್, ಮಯೂರಿ ನಟರಾಜ, ಸಲ್ಮಿನ್ ಶೆರಿಫ್, ಶಂಕರ್ ಮೂರ್ತಿ ಎಸ್ಆರ್, ರಕ್ಷಿತ್ ಕೌಪ್, ದವನ ಧನರಾಜ್, ಅನಿರುದ್ಧ್ ಭಟ್, ದಾಮಿನಿ ಧನರಾಜ್, ಆದಿತ್ಯ ಬಿ ಪೂಜಾರ್ ಬಣ್ಣ ಹಚ್ಚಿದ್ದು, ಪರಂವ ಸ್ಟುಡಿಯೋಸ್ ಬ್ಯಾನರ್ ನಲ್ಲಿ ಜಿಎಸ್ ಗುಪ್ತ ಹಾಗೂ  ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ಶ್ರೀವತ್ಸನ್  ಸೆಲ್ವರಾಜನ್ ಛಾಯಾಗ್ರಹಣ, ಚಂದ್ರಜಿತ್ ಬೆಳ್ಳಿಯಪ್ಪ ಸಂಭಾಷಣೆ, ದೀಕ್ಷಿತ್ ಕುಮಾರ್ ನೃತ್ಯ  ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular