HomeLatest NewsBREAKING: ಮದುವೆಯಾಗುವುದಾಗಿ ನಿಶ್ಚಿತಾರ್ಥ ಮಾಡಿಕೊಂಡು ಅತ್ಯಾಚಾರವೆಸಗಿ ಕೈಕೊಟ್ಟ ಆರೋಪ: ಶಾಸಕ ಪ್ರಭು ಚೌವ್ಹಾಣ್ ಮಗನ ವಿರುದ್ಧ...

BREAKING: ಮದುವೆಯಾಗುವುದಾಗಿ ನಿಶ್ಚಿತಾರ್ಥ ಮಾಡಿಕೊಂಡು ಅತ್ಯಾಚಾರವೆಸಗಿ ಕೈಕೊಟ್ಟ ಆರೋಪ: ಶಾಸಕ ಪ್ರಭು ಚೌವ್ಹಾಣ್ ಮಗನ ವಿರುದ್ಧ ಎಸ್ ಪಿಗೆ ದೂರು ನೀಡಿದ ಸಂತ್ರಸ್ತೆ

ಬೀದರ್: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿ ಕೈಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಪ್ರಭು ಚೌವ್ಹಾಣ್ ಪುತ್ರನ ವಿರುದ್ಧ ಸಂತ್ರಸ್ತೆ ಬೀದರ್ ಎಸ್ ಪಿಗೆ ದೂರು ನೀಡಿದ್ದಾರೆ.

ಪ್ರಭು ಚೌವ್ಹಾಣ್ ಪುತ್ರ ಪ್ರತೀಕ್ ಚೌವ್ಹಾಣ್ ವಿರುದ್ಧ ಬೀದರ್ ಎಸ್ ಪಿ ಪ್ರದೀಪ್ ಗುಂಟೆ ಅವರಿಗೆ ಸಂತ್ರಸ್ತ ಯುವತಿ ದೂರು ನೀಡಿದ್ದು, ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಭು ಚೌವ್ಹಾಣ್ ಪುತ್ರ ಪ್ರತೀಕ್ ಚೌವ್ಹಾಣ್ ವಿರುದ್ಧ ಅರೇಂಜ್ಡ್ ಸೆಕ್ಸ್ ದೋಖಾ ಆರೋಪ ಕೇಳಿಬಂದಿದೆ. ಮಹಾರಾಷ್ಟ್ರ ಮೂಲದ ಯುವತಿಯೊಂದಿಗೆ ಕುಟುಂಬದವರೆ ಸೇರಿ ಮದುವೆ ನಿಶ್ಚಿತಾರ್ಥ ಮಾಡಿದ್ದು, 2023 ಡಿಸೆಂಬರ್ 25ರಂದು ನಿಶ್ಚಿತಾರ್ಥವಾಗಿತ್ತು. ನಿಶ್ಚಿತಾರ್ಥದ ಬಳಿಕ ಪ್ರತೀಕ್ ಚೌವ್ಹಾಣ್, ಯುವತಿಯನ್ನು ಮಹಾರಾಷ್ಟ್ರದ ಹಲವೆಡೆ ಸುತ್ತಾಡಲು ಕರೆದೊಯ್ದಿದ್ದಾರೆ. ಈ ವೇಳೆ ಯುವತಿ ಮೇಲೆ ಪ್ರತೀಕ್ ಅತ್ಯಾಚಾರವೆಸಗಿದ್ದಾನೆ. ನಿಶ್ಚಿತಾರ್ಥವಾಗಿದೆ, ಹೇಗಂದರೂ ಇಷ್ಟರಲ್ಲೇ ಮದುವೆಯಾಗುತ್ತೇವೆ ಎಂದು ಯುವತಿಯೊಂದಿಗೆ ಬಲವಂತವಾಗಿ ದೈಹಿಕ ಸಂಪರ್ಕವೇರ್ಪಡಿಸಿದ್ದಾರೆ. ಈಗ ಮದುವೆಯಾಗಲು ನಿರಾಕರಿಸುತ್ತಿದ್ದು, ಮಾತುಕತೆಗೆಂದು ಮನೆಗೆ ಹೋದ ನಮ್ಮ ಕುಟುಂಬದ ಮೇಲೆ ಪ್ರತೀಕ್ ಚೌವ್ಹಾಣ್ ಹಾಗೂ ಕುಟುಂಬದವರು ಹಲ್ಲೆ ನಡೆಸಿದ್ದಾರೆ.

ಪ್ರತೀಕ್ ಚೌವ್ಹಾಣ್ ನಿಂದ ಮೋಸ ಹೋದ ಸಂತ್ರಸ್ತ ಯುವತಿ ಈಗಾಗಲೇ ಮಹಿಳಾ ಆಯೋಗಕ್ಕೆ ದೂರು ನೀಡಿದ್ದು, ದೀಗ ಬೀದರ್ ಎಸ್ ಪಿಗೆ ಅಧಿಕೃತವಾಗಿ ದೂರು ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular