ಮೈಸೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಬಿಡಡಿ ಟೌನ್ ಶಿಪ್ ವಿಚಾರವಾಗಿ ಚರ್ಚಿಸಲು ಬೈರಮಂಗಲಕ್ಕೆ ಬರುವಂತೆ ಮುಖ್ಯಮಂತ್ರಿ ಡಿ,ಕೆ.ಶಿವಕುಮಾರ್ ಅವರನ್ನು ಆಹ್ವಾನಿಸಿದ್ದಾರೆ. ಸಿಎಂ ಡಿ.ಕೆ.ಶಿವಕುಮಾರ್ ಅವರು ವಿಧಾನಸೌಧಕ್ಕೆ ಬನ್ನಿ ಚರ್ಚಿಸೋಣ ಎಂದಿದ್ದಾರೆ. ಚರ್ಚೆ ಮಾಡಲು ಇಬ್ಬರೂ ಸಿದ್ಧರಿದ್ದಾರೆ. ಚುನಾಅವಣೆಯಲ್ಲಿ ಮತ ಕೇಳುವಾಗ ನಾವು ಬೀದಿ ಬೀದಿನಲ್ಲಿ ಹೋಗಿ ವೋಟ್ ಕೇಳುತ್ತೇವೆ. ಹೀಗಿರುವಾಗ ಡಿ,ಕೆ.ಶಿವಕುಮಾರ್ ಅವರು ಮತದಾರರಾಗಿರುವ ರೈತರ ಬಳಿ ಹೋಗಿ ಅವರ ಸಮಸ್ಯೆ ಬಗ್ಗೆ ಆಲಿಸಲಿ ಎಂದು ಬಿಜೆಪಿ ಮಾಜಿ ಸಂಸದ ಪ್ರತಾಅಪ್ ಸಿಂಹ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಡಿದ ಪ್ರತಾಪ್ ಸಿಂಹ, ನಾಅವು ಚುನಾವಣೆ ವೇಳೆ ಬೀದಿ ಬೀದಿಗಳಿಗೆ, ಕೇರಿ ಕೇರಿಗಳಿಗೆ, ಮೊಹಲ್ಲಾಗಳಿಗೂ ತೆರಳಿ ಅವ್ವ, ಅಕ್ಕ ವೋಟ್ ಹಾಅಕಿ ಎಂದು ಕೇಳುತ್ತೇವೆ. ಅಲ್ಲಿ ಪಂಚೆ ತೊಟ್ಟುಕೊಂಡವರಿಗೂ, ಪ್ಯಾಂಟ್ ಧರಿಸಿದವರಿಗೂ ಎಲ್ಲರೀಗೂ ಯಜಮಾನರೇ ದಯವಿಟ್ಟು ವೋಟ್ ಹಾಕಿ ಎನ್ನುತ್ತೇವೆ. ನಮಗೆ ವೋಟ್ ಹಾಕಿ, ನಮ್ಮನ್ನು ಅಧಿಕಾರದಲ್ಲಿ ಕೂರಿಸುವರೆಗೂ ಅವರು ನಮಗೆ ಯಜಮಾನರು. ನಾವು ಅಧಿಕಾರಕ್ಕೆ ಕುಳಿತ ಮೇಲೆ ನಾವು ಸಾಹೇಬರಾಗುತ್ತೇವಾ? ಕುಮಾರಣ್ಣ ಬೈರಮಂಗಲಕ್ಕೆ ಕರೆದಿದ್ದಾರೆ. ನೀವ್ಯಾರೂ ಸಾಹೇಬರಾಗಿಲ್ಲ. ಚುನಾವಣೆ ಸಂದರ್ಭದಲ್ಲಿ ಅವ್ವ, ಅಕ್ಕ, ಅಣ್ಣ, ಯಜಮಾನರೇ ಎಂದು ಕರೆಯುತ್ತೀರಾ. ಅಂತವರ ಭೂಮಿ ಕಿತ್ತುಕೊಳ್ಳಲು ಹೊರಟಿದ್ದೀರಾ. ಅವರು ಕೊಡುವುದಿಲ್ಲ ಎನ್ನುತ್ತೀದ್ದಾರೆ. ಕೆಲವರು ಕೊಡಲು ಸಿದ್ಧರಿರಬಹುದು. ಹಾಅಗಾಗಿ ನಾವು ಯಾರ ಬಳಿ ಚುನಾವಣೆ ವೇಳೆ ಅವ್ವ, ಅಕ್ಕ, ಅಣ್ಣ ಎನ್ನುತ್ತೇವೆ, ಯಾರನ್ನು ಯಜಮಾನರೇ ಎಂದು ಕರೆಯುತ್ತಿದ್ದೇವೆ ಅವರ ಬಳಿ ಹೋಗಿ. ಈ ರೀತಿ ಒಂದು ಟೌನ್ ಶಿಪ್ ಮಾಡುತ್ತಿದ್ದೇವೆ. ಈ ಭಾಗದ ಜನರಿಗೆ ಈ ರೀತಿ ಒಳ್ಳೆಯದಾಗುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಡಿ. ನಿಮಗೂ ಆರ್ಥಿಕವಾಗಿ ಸಾಕಷ್ಟು ಲಾಭವನ್ನು ಕೊಡುತ್ತೇವೆ ಎಂದು ಅವರಿಗೆ ಹೇಳಿ. ಅವರು ಯಾರೋ ರಿಯಲ್ ಎಶ್ಟೇಟ್ ಅವರಿಗೆ ಮಾಅರುವ ಬದಲು ನಿಮಗೇ ಭೂಮಿ ಕೊಡಬಹುದು. ಆದರೆ ನೀವು ರೈತರ ಬಳಿಯೇ ಹೋಗಲ್ಲ, ಅವರೊಂದಿಗೆ ಕುಳಿತು ಮಾತನಾಡಲ್ಲ. ವೋಟ್ ಸಂದಭದಲ್ಲಿ ಮಾತ್ರ ಅವರು ನಿಮಗೆ ಯಜಮಾನರು ನಂತ್ರ ನೀವು ಅವರುಗೆ ಸಾಹೇಬ್ರು ಅಂತ ಅರ್ಥಾನಾ? ಕುಮಾರಣ್ಣ ಕರೆದಿರುವುದು ಸರಿಯಿದೆ. ಬೈರಮಂಗಲಕ್ಕೆ ಹೋಗಿ ಮುಖ್ಯಮಂತ್ರಿಗಳು ಚರ್ಚಿಸಬೇಕು ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಅವರು ಕೂಡ ಬಾರ್ನ್ ಫೈಟರ್ ಅವರು. ನಾನು ಅವರ ಬಗ್ಗೆ ಅನ್ಯತಾ ಮಾತನಾಡಲು ಹೋಗಲ್ಲ. ಯಾಕೆಂದರೆ ಸಿದ್ದರಾಮಯ್ಯ ಬಳಿ ಚೇರ್ ಕಿತ್ತುಕೊಳ್ಳಬೇಕು ಎಂದರೆ ತಾಕತ್ತಿರಬೇಕು. ಇಷ್ಟು ಶಕ್ತಿವಂತರು ನೀವು. ಇನ್ನು ನಿಮಗೆ ವೋಟ್ ಹಾಕಿದ ಜನರ ಬಳಿ ಹೋಗಿ ಈ ಕಾರಣಕ್ಕಾಗಿ ಟೌನ್ ಶಿಪ್ ಮಾಡುತ್ತಿದ್ದೇವೆ ಎಂದು ಕನ್ವಿನ್ಸ್ ಮಾಡುವುದರಲ್ಲಿ ಯಾವ ತಪ್ಪು ಇಲ್ಲ ಡಿ.ಕೆ.ಶಿವಕುಮಾರ್ ಅವರೇ, ದಯವಿಟ್ಟು ಹೋಗಿ ರೈತರ ಬಳಿ ಮಾತಾಡಿ ಎಂದು ಮನವಿ ಮಾಡಿದ್ದಾರೆ.
2028ಕ್ಕೆ ಮತ್ತೆ ಚುನಾವಣೆ ಬರುತ್ತೆ. ಮತ್ತೆ ಅದೇ ಜನರ ಬಳಿ ಹೋಗಿ ಮತ ಕೇಳಬೇಕಲ್ಲವೇ? ಆಗ ಮತ್ತೆ ಅವ್ವ, ಅಕ್ಕ, ಅಣ್ಣ, ಯಜಮಾನರೇ ಎಂದು ವೋಟ್ ಕೇಳುತ್ತೇವಲ್ಲವೇ? ಹಾಗಾಗಿ ಇಂದೇ ಅವರ ಬಳಿ ಹೋಗಿ ಮಾತನಾಡಿ. ರಾಜಕಾರಣದಲ್ಲಿ ವಿನಮ್ರತಾ ಭಾವನೆ ಇತ್ತು ಎಂದರೆ ಜನರು, ರೈತರು ಕೂಡ ಪ್ರಶಂಸಿಸುತ್ತಾರೆ. ತಗ್ಗಿ ಬಗ್ಗಿ ಜನರ ಬಳಿ ಹೋಗಿ ಅವರ ಮನವೊಲಿಸಿದರೆ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಸಲಹೆ ನೀಡಿದ್ದಾರೆ.

