HomeKarnatakaನನ್ನ ಜೀವವಿರುವವರೆಗೂ ನಾನು ಮೋದಿ ಭಕ್ತ; ಸಾಯುವವರೆಗೂ ನಾನು ಬಿಜೆಪಿ ಕಾರ್ಯಕರ್ತ: ಸಂಸದ ಪ್ರತಾಪ್ ಸಿಂಹ...

ನನ್ನ ಜೀವವಿರುವವರೆಗೂ ನಾನು ಮೋದಿ ಭಕ್ತ; ಸಾಯುವವರೆಗೂ ನಾನು ಬಿಜೆಪಿ ಕಾರ್ಯಕರ್ತ: ಸಂಸದ ಪ್ರತಾಪ್ ಸಿಂಹ ಹೇಳಿಕೆ

ಮೈಸೂರು: ಪ್ರತಾಪ್ ಸಿಂಹ ಹೆಸರು ಕೆಡಿಸಿಕೊಂಡಿದ್ದಕ್ಕೆ ಟಿಕೆಟ್ ತಪ್ಪುತ್ತಿದೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಕಿಡಿಕಾರಿರುವ ಸಂಸದ ಪ್ರತಾಪ್ ಸಿಂಹ, ಸಿದ್ದರಾಮಯ್ಯ ಹೆಸರು ಕೆಡಿಸಿಕೊಂಡಿದ್ದಕ್ಕೆ ಇಲ್ಲಿ ಸೋತು ಬಾದಾಮಿಗೆ ಹೋದ್ರಾ? ನಂತರ ಅಲ್ಲಿ ಹೆಸರು ಕೆಡಿಸಿಕೊಂಡು ಮತ್ತೆ ಇಲ್ಲಿಗೆ ಬಂದ್ರಾ? ಸಿದ್ದರಾಮಯ್ಯ ಹಿರಿಯ ನಾಯಕ ಈ ರೀತಿ ಮಾತನಾಡಬಾರದು. ಅವರು ಅದೆಷ್ಟು ಚುನಾವಣೆಗಳಲ್ಲಿ ಸೋತಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ನನ್ನ ಜೀವ ಇರುವವರೆಗೂ ನಾನು ಮೋದಿ ಭಕ್ತ. ಯಾರು ಏನೇ ಕೊಡುತ್ತೇನೆ ಎಂದರೂ ನಾನು ಎಲ್ಲೂ ಹೋಗಲ್ಲ. ಸಾಯುವವರೆಗೂ ನಾನು ಬಿಜೆಪಿ ಕಾರ್ಯಕರ್ತ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿಯವರು ಏನೇ ನಿರ್ಧಾರ ತೆಗೆದುಕೊಂಡರೂ ನಾನು ಸ್ವೀಕರಿಸುತ್ತೇನೆ. ಮೋದಿಗಿಂತ ದೊಡ್ಡದು ಯಾವುದೂ ಇಲ್ಲ. ಅವಕಾಶ ಮಾಡಿಕೊಟ್ಟರು ಖುಷಿ ಇದೆ. ಕೊಡದಿದ್ದರೂ ತೃಪ್ತಿಯಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಟಿಕೆಟ್ ವಿಚಾರವಾಗಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಎಳೆದು ತರಬೇಡಿ. ಬಿಎಸ್ ವೈ ಪಕ್ಷ ಕಟ್ಟದಿದ್ದರೆ ರಾಜ್ಯದಲ್ಲಿ ಬಿಜೆಪಿ ಎಲ್ಲಿ ಇರುತ್ತಿತ್ತು? ಬಿಎಸ್ ವೈ ಬಿಜೆಪಿಯನ್ನು ಕಟ್ಟದಿದ್ದರೆ ರಾಜ್ಯದಲ್ಲಿ ಬಿಜೆಪಿ ಇರುತ್ತಿತ್ತಾ? ನಮ್ಮಂತವರು ಎಲ್ಲಿ ಎಂಪಿಗಳಾಗುತ್ತಿದ್ದೆವು? ಕರ್ನಾಟಕಕ್ಕೆ ಯಡಿಯೂರಪ್ಪ ಒಂದು ರೀತಿ ಮೋದಿ ಇದ್ದಹಾಗೆ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular