ಮಂಡ್ಯ: ರಾಜ್ಯದಲ್ಲಿ ತಾಲಿಬಾನಿ ಸರ್ಕಾರವಿದೆ. ಡಿಜೆ ಹಳ್ಳಿ, ಕೆಜಿಹಳ್ಳಿ ಗಲಭೆಕೋರರ ಮೇಲಿನ ಕೇಸ್ ಹಿಂಪಡೆದಿದ್ದಕ್ಕೇ ಬಾಲ ಬಿಚ್ಚಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮದ್ದೂರಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರತಾಪ್ ಸಿಂಹ, ಮುಸ್ಲಿಂರು ಶಾಂತಿಪ್ರಿಯರು ಅಂತಾರೆ. ಮಸೀದಿಯಲ್ಲಿ ಕಲ್ಲಿಟ್ಟುಕೊಂಡು ಕುಳಿತಿದ್ದಾರೆ. ನಾಗಮಂಗಲ ಆಯ್ತು. ಈಗ ಮದ್ದೂರಿಗೆ ಈ ಸ್ಥಿತಿ ಬಂದಿದೆ. ಇಲ್ಲಿ ಹುಟ್ಟಿಬೆಳೆದು ಗಡಿಯಾಚಗೆ ನಿಷ್ಠೆಯಿಟ್ಟುಕೊಂಡವರು ಕಲ್ಲು ತೂರಾಟ ನಡೆಸುತ್ತಿದ್ದಾರೆ. ಉತ್ತರ ಪ್ರದೇಶ ಪೊಲೀಸರು ಗಣೇಶ ಮೆರವಣಿಗೆಗೆ ಬಂದು ಡಾನ್ಸ್ ಮಾಡುತ್ತಾರೆ. ತಾಲಿಬಾನಿ ಮನಸ್ಥಿತಿಯ ಸರ್ಕಾರ ರಾಜ್ಯದಲ್ಲಿದೆ ಎಂದು ಕಿಡಿಕಾರಿದರು.
ಕಲ್ಲು ಹೊಡೆದವರು ಅರೆಸ್ಟ್ ಆಗಬೇಕು. ಮಹಿಳೆಯರ ಮೇಲೆ ಲಾಠಿಚಾರ್ಜ್ ಮಾಡಿರುವ ಪೊಲೀಸರು ಸಸ್ಪೆಂಡ್ ಆಗಬೇಕು. ಆತ್ಮರಕ್ಷಣೆಗಾಗಿ ಹಿಂದೂಗಳು ತಿರುಗಿ ಬೀಲುತ್ತಾರೆ. ಹಿಂದೂಗಳು ಕಲ್ಲು ಬಿಸಾಡಲ್ಲ, ಬಿಸಾಡಿದ್ರೆ ಬಿಡಲ್ಲ. ಕಲ್ಲು ಬೀಸಿದ ಮಸೀದಿ ಬಾಗಿಲು ಮುಚ್ಚಿಸಿ ಎಂದು ಒತ್ತಾಯಿಸಿದರು.