
ನಿನ್ನೆ ಬಜೆಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಆನ್ಲೈನ್ ವಿವಾಹ ನೋಂದಣಿ ಜಾರಿಗೆ ತರುವುದಾಗಿ ಘೋಷಿಸಿದ್ದಾರೆ. ಇದಕ್ಕೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಿರೋಧ ವ್ಯಕ್ತಪಡಿಸಿದ್ದಾರೆ. ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ ಸರ್ಕಾರ ಆನ್ ಲೈನ್ ವಿವಾಹ ನೋಂದಣಿ ಘೋಷಿಸಿದೆ, ಇದನ್ನು ಜಾರಿ ಮಾಡಿದರೆ ನಾವು ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಮೊದಲು ಇದ್ದ ಹಾಗೆ ರಿಜಿಸ್ಟ್ರಾರ್ ಆಫೀಸ್ ಗೆ ತೆರಳಿ ನೋಂದಣಿ ಮಾಡುವ ಪದ್ಧತಿಯೇ ಸರಿಯಾಗಿದೆ. ಕೂಡಲೇ ಆನ್ಲೈನ್ ನೋಂದಣಿ ರದ್ದು ಮಾಡಬೇಕು , ಇದನ್ನು ಜಾರಿ ಮಾಡಿದರೆ ನಾವು ಪ್ರತಿಭಟನೆ ನಡೆಸುತ್ತೇವೆ ಎಂದು ಮುತಾಲಿಕ್ ಎಚ್ಚರಿಕೆ ನೀಡಿದರು.

