ಬೆಂಗಳೂರು: ಕೂಚ್ ಬೆಹಾರ್ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ 404 ರನ್ ಗಳಿಸಿ ದಾಖಲೆ ಬರೆದಿರುವ ಕರ್ನಾಟಕದ ಪ್ರತಿಭಾವಂತ ಯುವ ಆಟಗಾರ ಪ್ರಖರ್ ಚತುರ್ವೇದಿ ಅವರನ್ನು ಸಿಎಂ ಸಿದ್ಧರಾಮಯ್ಯ ಅಭಿನಂದಿಸಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಎಂ ಭೇಟಿಯಾಗಿ ಪ್ರಖರ್ ಅವರನ್ನು ಅಭಿನಂದಿಸಿದ್ದಾರೆ. ಅಗಾಧ ಪ್ರತಿಭೆ, ಅದ್ಭುತ ಆಟದ ಮೂಲಕ ನಾಡಿನ ಮನೆಮಾತಾಗಿರುವ ಈ ಯುವಕನ ಕ್ರೀಡಾ ಬದುಕು ಯಶಸ್ಸಿನಿಂದ ಕೂಡಿರಲಿ ಎಂದು ಹಾರೈಸಿದ್ದಾರೆ.
ಕೂಚ್ ಬೆಹಾರ್ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ 404 ರನ್ ಗಳಿಸಿ ದಾಖಲೆ ಬರೆದಿರುವ ಕರ್ನಾಟಕದ ಪ್ರತಿಭಾವಂತ ಯುವ ಆಟಗಾರ ಪ್ರಖರ್ ಚತುರ್ವೇದಿ ಅವರನ್ನು ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭೇಟಿಯಾಗಿ ಅಭಿನಂದಿಸಿದೆ.
ಅಗಾಧ ಪ್ರತಿಭೆ, ಅದ್ಭುತ ಆಟದ ಮೂಲಕ ನಾಡಿನ ಮನೆಮಾತಾಗಿರುವ ಈ ಯುವಕನ ಕ್ರೀಡಾ ಬದುಕು ಯಶಸ್ಸಿನಿಂದ ಕೂಡಿರಲಿ ಎಂದು… pic.twitter.com/Y6XrylQrQo— Siddaramaiah (@siddaramaiah) January 17, 2024

