HomeKarnatakaBIG NEWS: ಸಾಕ್ಷ್ಯ ನಾಶ ಸಾಧ್ಯತೆ: ಪ್ರಜ್ವಲ್ ರೇವಣ್ಣ ಸರ್ಕಾರಿ ನಿವಾಸಕ್ಕೆ ಬೀಗ ಹಾಕಿದ ಪೊಲೀಸರು

BIG NEWS: ಸಾಕ್ಷ್ಯ ನಾಶ ಸಾಧ್ಯತೆ: ಪ್ರಜ್ವಲ್ ರೇವಣ್ಣ ಸರ್ಕಾರಿ ನಿವಾಸಕ್ಕೆ ಬೀಗ ಹಾಕಿದ ಪೊಲೀಸರು

ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಎಸ್ ಐಟಿ ಅಧಿಕಾರಿಗಳು ಹಾಸನದಲ್ಲಿರುವ ಪ್ರಜ್ವಲ್ ರೇವಣ್ಣ ಸರ್ಕಾರಿ ನಿವಾಸಕ್ಕೆ ಬೀಗ ಹಾಕಿದ್ದಾರೆ.

ಸಂಸದರ ಸರ್ಕಾರಿ ನಿವಾಸದಲ್ಲಿಯೇ ಲೈಂಗಿಕ ದೌರ್ಜನ್ಯ, ವಿಡಿಯೋ ಚಿತ್ರೀಕರಣ ಮಾಡಿರುವ ಬಗ್ಗೆ ಸಂತ್ರಸ್ತೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ದಟ್ಟವಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರ ಮೂಲಕ ಎಸ್ ಐಟಿ ಹಾಸನದ ಸಂಸದರ ಮನೆ ಆರರ್.ಸಿ.ನಗರದಲ್ಲಿರುವ ಮನೆಗೆ ಬೀಗ ಹಾಕಿದ್ದಾರೆ.

ಇಂದು ಎಸ್ ಐಟಿ ಅಧಿಕಾರಿಗಳು ಮನೆಯನ್ನು ಸುಪರ್ಧಿಗೆ ಪಡೆದು ಸಂತ್ರಸ್ತೆ ಕರೆದೊಯ್ದು ಸ್ಥಳ ಮಹಜರು ನಡೆಸುವ ಸಾಧ್ಯತೆ ಇದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular