HomeHealthಸ್ತನದ ಗಾತ್ರ ಹೆಚ್ಚಿಸಲು ಈ ಯೋಗಗಳನ್ನು ಅಭ್ಯಾಸ ಮಾಡಿ

ಸ್ತನದ ಗಾತ್ರ ಹೆಚ್ಚಿಸಲು ಈ ಯೋಗಗಳನ್ನು ಅಭ್ಯಾಸ ಮಾಡಿ

ಸ್ತನದ ಗಾತ್ರ ಕೂಡ ಮಹಿಳೆಯರ ದೇಹ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಕೆಲವರು ಮಹಿಳೆಯರು ಸ್ತನದ ಗಾತ್ರ ಹೆಚ್ಚಿಸಲು ತೈಲಗಳು, ಕ್ರೀಂಗಳನ್ನು, ಶಸ್ತ್ರಚಿಕಿತ್ಸೆ ಮುಂತಾದವುಗಳನ್ನು ಮಾಡುತ್ತಾರೆ. ಆದರೆ ಇವುಗಳು ಅಡ್ಡಪರಿಣಾಮ ಬೀರಬಹುದು. ಹಾಗಾಗಿ ಈ ಯೋಗಗಳನ್ನು ಅಭ್ಯಾಸ ಮಾಡಿ. ಇದರಿಂಧ ಸ್ತನಗಾತ್ರ ಹೆಚ್ಚಿಸಬಹುದು.

*ಭುಜಂಗಾಸನ : ಇದು ಸ್ತನದ ಗಾತ್ರ ಹೆಚ್ಚಿಸಲು ಸಹಕಾರಿಯಾಗಿದೆ. ನಿಮ್ಮ ಹೊಟ್ಟೆಯ ಮೇಲೆ ಮಲಗಿ ನಿಮ್ಮ ಅಂಗೈಯನ್ನು ಭುಜದ ನೇರಕ್ಕೆ ಕೆಳಗೆ ಇರಿಸಿ ಕೈಗಳ ಮೇಲೆ ಒತ್ತಡ ಹೇರಿ ದೇಹವನ್ನು ಮೇಲಕ್ಕೆತ್ತಿ. ತಲೆಯನ್ನು ಹಿಂದಕ್ಕೆ ಭಾಗಿಸಿ. ಈ ಸ್ಥಾನದಲ್ಲಿ ಕೆಲವು ಸೆಕೆಂಡುಗಳ ಕಾಲ ಇರಿ.

*ಶಲಭಾಸನ : ಇದು ಕೂಡ ಸ್ತನದ ಗಾತ್ರ ಹೆಚ್ಚಿಸಲು ಸಹಕಾರಿಯಾಗಿದೆ. ಹಾಗೇ ಬೆನ್ನು ನೋವು, ಆಯಾಸವನ್ನು ನಿವಾರಿಸುತ್ತದೆ. ನೀವು ಹೊಟ್ಟೆಯ ಮೇಲೆ ಮಲಗಿ ನಿಮ್ಮ ಎರಡು ಕೈಗಳನ್ನು ಸೊಂಟದ ಕೆಳಗೆ ಇರಿಸಿ ನಿಧಾನವಾಗಿ ಉಸಿರಾಡಿ. ಬಳಿಕ ಎರಡು ಕೈಗಳನ್ನು ಹಾಗೂ ಎರಡೂ ಕಾಲುಗಳನ್ನು ಮೇಲಕ್ಕೆತ್ತಿ ನೇರವಾಗಿರಿಸಿಕೊಳ್ಳಿ. ಈ ಸ್ಥಾನದಲ್ಲಿ ಕೆಲವು ಸೆಕೆಂಡುಗಳ ಕಾಲ ಇರಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular