HomeEntertainmentಚಿತ್ರೀಕರಣಕ್ಕೆ ವಾಪಸ್ಸಾದ ರಾಮ್ ಚರಣ್ ಗೆ ʼನಾಟು ನಾಟುʼ ಸ್ಟೆಪ್ಸ್ ಮೂಲಕ ವೆಲ್‌ ಕಮ್; ಪ್ರಭುದೇವ‌...

ಚಿತ್ರೀಕರಣಕ್ಕೆ ವಾಪಸ್ಸಾದ ರಾಮ್ ಚರಣ್ ಗೆ ʼನಾಟು ನಾಟುʼ ಸ್ಟೆಪ್ಸ್ ಮೂಲಕ ವೆಲ್‌ ಕಮ್; ಪ್ರಭುದೇವ‌ ವಿಡಿಯೋ ವೈರಲ್

ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗೆದ್ದಾಗಿನಿಂದ ಆರ್ ಆರ್ ಆರ್ ಚಿತ್ರದ ನಾಟು ನಾಟು ಗೀತೆ ಸಖತ್ ಸದ್ದು ಮಾಡ್ತಿದೆ. ಇದೀಗ ಚಿತ್ರೀಕರಣದ ಸಮಯದಲ್ಲೂ ಅದರದ್ದೇ ಹವಾ.

ರಾಮ್ ಚರಣ್ ಅವರ ಸ್ನೇಹಿತರು ಮತ್ತು ಸಹೋದ್ಯೋಗಿಗಳು ಸಹ ಈ ವೃತ್ತಿಜೀವನದ ಮೈಲಿಗಲ್ಲು ಆಚರಿಸುತ್ತಿದ್ದಾರೆ. ನಿರ್ದೇಶಕ-ನೃತ್ಯ ಸಂಯೋಜಕ ಪ್ರಭುದೇವ‌, ರಾಮ್ ಚರಣ್ ಅವರು ಹೊಸ ಚಲನಚಿತ್ರದ ಸೆಟ್ ನಲ್ಲಿ ನಾಟು ನಾಟು ಹಾಡಿಗೆ ನೃತ್ಯ ಮಾಡಿ ಅವರನ್ನು ಸ್ವಾಗತಿಸಿದ್ದಾರೆ.

ಸದ್ಯ ರಾಮ್ ಚರಣ್ ತಾತ್ಕಾಲಿಕವಾಗಿ RC15 ಎಂಬ ಶೀರ್ಷಿಕೆ ಹೊಂದಿರುವ ತಂಡದಲ್ಲಿ ಕೆಲಸ ಮಾಡ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿತ್ರೀಕರಣಕ್ಕೆ ವಾಪಸ್ಸಾದ ಅವರನ್ನು ಚಿತ್ರತಂಡ ವಿಭಿನ್ನವಾಗಿ ಸ್ವಾಗತಿಸಿ ಖುಷಿ ನೀಡಿದೆ. ಈ ವಿಡಿಯೋವನ್ನ ನಟ ರಾಮ್ ಚರಣ್ ಹಂಚಿಕೊಂಡಿದ್ದು , ಅವರ ಪತ್ನಿ ಉಪಾಸನಾ ಕೂಡ ಇನ್ ಸ್ಟಾ ಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular