ಬೆಂಗಳೂರು ನಗರದ ವಿವಿಧ ಬಡಾವಣೆಗಳಲ್ಲಿ ಜನವರಿ 21ರ ಬುಧವಾರ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬೆಳಗ್ಗೆ 10 ರಿಂದ ಸಂಜೆ 6ರ ತನಕ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮಾಹಿತಿ ನೀಡಲಾಗಿದೆ.
ಪೂರ್ವ ಬೆಂಗಳೂರು ಭಾಗದಲ್ಲಿ ಮಾತ್ರ ಬುಧವಾರ ದಿನವಿಡೀ ವಿದ್ಯುತ್ ಸಂಪರ್ಕ ಇರುವುದಿಲ್ಲ. ಮನೆಯಿಂದ ಕೆಲಸ ಮಾಡುವವರು ಹಾಗೂ ಗೃಹಿಣಿಯರಿಗೆ ಈ ಕುರಿತು ಮಾಹಿತಿ ನೀಡಲಾಗಿದ್ದು, ಬಡಾವಣೆಗಳ ವಿವರಗಳನ್ನು ಪ್ರಕಟಿಸಲಾಗಿದೆ.
ಯಾವ-ಯಾವ ಬಡಾವಣೆಗಳು: HRBR 1ನೇ, 2ನೇ ಮತ್ತು 3ನೇ ಬ್ಲಾಕ್, ಸರ್ವೀಸ್ ರಸ್ತೆ, ಕಮ್ಮನಹಳ್ಳಿ ಮುಖ್ಯ ರಸ್ತೆ, CMR ರಸ್ತೆ, ಬಾಬುಸಾಬ್‌ಪಾಳ್ಯ, ಬಾಲಚಂದ್ರ ಲೇಔಟ್, ಫ್ಲವರ್ ಗಾರ್ಡನ್, MM ಗಾರ್ಡನ್, ಅರ್ಕಾವತಿ ಲೇಔಟ್, ಅಂಜನಾದ್ರಿ ಲೇಔಟ್ ಎನ್ಕ್ಲೇವ್, ದಿವ್ಯ ಉನ್ನತಿ ಲೇಔಟ್, ವಿಜಯೇಂದ್ರ ಗಾರ್ಡನ್, ಮಲ್ಲಪ್ಪ ಲೇಔಟ್, ಪ್ರಕೃತಿ ಟೌನ್‌ಶಿಪ್, ಬಾಲಾಜಿ ಲೇಔಟ್‌ಗಳಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಲಿದೆ.
GNR ಗಾರ್ಡನ್, ಚೆಳ್ಳಿಕೆರೆ, ಸಾಮುದ್ರಿಕಾ ಎನ್ಕ್ಲೇವ್, 100 ಅಡಿ ರಸ್ತೆ, ಸರ್ವೀಸ್ ರಸ್ತೆ, 80 ಅಡಿ ರಸ್ತೆ, ಸುಬ್ಬಯ್ಯನಪಾಳ್ಯ, ಹೊರಮಾವು, ಮುನಿರೆಡ್ಡಿ ಲೇಔಟ್, ವಿಜಯಾ ಬ್ಯಾಂಕ್ ಕಾಲೋನಿ, ನಿಸರ್ಗ ಕಾಲೋನಿ, ನಂದನಂ ಕಾಲೋನಿ, ಅಮರ್ ಏಜೆನ್ಸಿ, P&T ಲೇಔಟ್, ಪಪ್ಪಯ್ಯ ಲೇಔಟ್, ಕೋಕನಟ್ ಗ್ರೋವ್ ಲೇಔಟ್‌ಗಳಲ್ಲಿ ಪವರ್ ಕಟ್.
ಆಶೀರ್ವಾದ್ ಕಾಲೋನಿ, ಶಕ್ತಿ ನಗರ, ಹೆಣ್ಣೂರು ಗ್ರಾಮ, ಭೈರವೇಶ್ವರ ಲೇಔಟ್, ಚಿಕ್ಕಣ್ಣ ಲೇಔಟ್, CMR ಲೇಔಟ್, ಹೆಣ್ಣೂರು ಕ್ರಾಸ್, ಕೆಂಚಪ್ಪ ಗಾರ್ಡನ್, ಬೃಂದಾವನ ಲೇಔಟ್, ಹೊಯ್ಸಳ ನಗರ, ಬೃಂದಾವನ ಅವೆನ್ಯೂ ಹೆರಿಟೇಜ್, ವಿನಾಯಕ ಲೇಔಟ್, ಜಯಂತಿ ಗ್ರಾಮ, BDA ಕಾಂಪ್ಲೆಕ್ಸ್ ಎದುರು ಪವರ್ ಕಟ್ ಇರಲಿದೆ.
ನರೇಂದ್ರ ಟೆಂಟ್ ಹತ್ತಿರ, OMBR ಲೇಔಟ್‌ನ ಕೆಲವು ಭಾಗಗಳು, ಕಸ್ತೂರಿ ನಗರದ ಕೆಲವು ಭಾಗಗಳು, ಪಿಲ್ಲಾರೆಡ್ಡಿ ನಗರದ ಕೆಲವು ಭಾಗಗಳು, ಕರಾವಳಿ ರಸ್ತೆ, ರಾಮಯ್ಯ ಲೇಔಟ್, ಅಜ್ಮಲ್ಲಪ್ಪ ಲೇಔಟ್, ದೊಡ್ಡ ಬಾಣಸವಾಡಿ, ರಾಮಮೂರ್ತಿ ನಗರ ಮುಖ್ಯ ರಸ್ತೆ, ಬಿ. ಚನ್ನಸಂದ್ರ, ನಂಜಪ್ಪ ಗಾರ್ಡನ್, ಆಗರ ಮುಖ್ಯ ರಸ್ತೆ, ದೊಡ್ಡಯ್ಯ ಲೇಔಟ್, ಬ್ಯಾಂಕ್ ಅವೆನ್ಯೂ ಮತ್ತು RS ಪಾಳ್ಯದಲ್ಲಿಯೂ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

