HomeEntertainmentಹೊಸ ಬಿಡುಗಡೆ ದಿನಾಂಕ ಘೋಷಣೆ ಮಾಡಿದ 'ಪೌಡರ್' ಚಿತ್ರತಂಡ

ಹೊಸ ಬಿಡುಗಡೆ ದಿನಾಂಕ ಘೋಷಣೆ ಮಾಡಿದ ‘ಪೌಡರ್’ ಚಿತ್ರತಂಡ

ದೂದ್ ಪೇಡ ದಿಗಂತ್ ಅಭಿನಯದ ಜನಾರ್ದನ್ ರೆಡ್ಡಿ ನಿರ್ದೇಶನದ ‘ಪೌಡರ್’ ಚಿತ್ರ ಮುಂದಿನ ತಿಂಗಳು ಆಗಸ್ಟ್ 15 ಸ್ವಾತಂತ್ರ ದಿನಾಚರಣೆಯ ದಿನದಂದು  ರಾಜ್ಯದ್ಯಂತ ತೆರೆ ಮೇಲೆ ಬರಲು ಸಜ್ಜಾಗಿತ್ತು. ಕಾರಣಾಂತರದಿಂದ ಇದೀಗ ಪೌಡರ್ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಬದಲಾವಣೆ ಮಾಡಿದೆ. ಆಗಸ್ಟ್ 23 ಕ್ಕೆ ಈ ಸಿನಿಮಾ ತೆರೆ ಕಾಣಲಿದೆ.

ಕಾಮಿಡಿ ಆಕ್ಷನ್ ಹಾಗೂ ರೊಮ್ಯಾಂಟಿಕ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ದಿಗಂತ್ ಸೇರಿದಂತೆ ಧನ್ಯ ರಾಮ್ ಕುಮಾರ್, ರಂಗಾಯಣ ರಘು, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ಅನಿರುದ್ಧ ಆಚಾರ್ಯ, ಗೋಪಾಲಕೃಷ್ಣ ದೇಶಪಾಂಡೆ, ರವಿಶಂಕರ್ ಗೌಡ, ಹುಲಿ ಕಾರ್ತಿಕ್, ತಾರಾ ಬಳಗದಲ್ಲಿದ್ದಾರೆ. krg ಸ್ಟುಡಿಯೋಸ್ ಬ್ಯಾನರ್ ನಡಿ ಕಾರ್ತಿಕ್ ಗೌಡ, ಯೋಗಿ ಜಿ ರಾಜ್, ವಿಜಯ್ ಸುಬ್ರಮಣ್ಯಂ ಬಂಡವಾಳ ಹೂಡಿದ್ದಾರೆ. ಎನ್ ಹರಿಕೃಷ್ಣ ಹಾಗೂ ಗೌತಮ್ ಪಲ್ಲಕ್ಕಿ ಸಂಕಲನ, ತ್ರಿಲೋಕ್ ತ್ರಿ ವಿಕ್ರಂ ಸಂಭಾಷಣೆ, ಹಾಗೂ ಅರ್ಜುನ್ ರಾಜ್ ಸಾಹಸ  ನಿರ್ದೇಶನವಿದೆ. ವಾಸುಕಿ ವೈಭವ್ ಸಂಗೀತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular