HomeJobsತುಮಕೂರು: ಪೌರ ಕಾರ್ಮಿಕರ ನೇಮಕಾತಿ, ವಿವರ

ತುಮಕೂರು: ಪೌರ ಕಾರ್ಮಿಕರ ನೇಮಕಾತಿ, ವಿವರ

ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾಧಿಕಾರಿಗಳ ಕಚೇರಿ ತುಮಕೂರು ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಇದು ತುಮಕೂರು ಮಹಾನಗರ ಪಾಲಿಕೆ, ಶಿರಾ ಮತ್ತು ತಿಪಟೂರು ನಗರಸಭೆಯಲ್ಲಿ ನೇರ ಪಾವತಿಯಡಿ ಖಾಲಿ ಇರುವ ಪೌರಕಾರ್ಮಿಕ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಪೌರಸೇವಾ ವೃಂದ ಮತ್ತು ನೇಮಕಾತಿ ನಿಯಮ 2010 ಮತ್ತು ಮಹಾನಗರಪಾಲಿಕೆಗಳ ವೃಂದ ಮತ್ತು ನೇಮಕಾತಿ ನಿಯಮ 2011ರ ರೀತ್ಯಾ ಮಹಾನಗರಪಾಲಿಕೆ ಮತ್ತು ನಗರಸಭೆಗಳಲ್ಲಿ ಶೇ.50ರಷ್ಟು ಪೌರಕಾರ್ಮಿಕರನ್ನು ನೇರ ನೇಮಕಾತಿ ಮೂಲಕ ಹಾಗೂ ಶೇ.50 ರಷ್ಟು ಪೌರಕಾರ್ಮಿಕರನ್ನು ನೇರಪಾವತಿ ಮೂಲಕ ಪಡೆಯಲು ಅವಕಾಶ ಕಲ್ಪಿಸಲಾಗಿರುತ್ತದೆ.

ಮಾರ್ಗಸೂಚಿಗಳನ್ನು ಅನುಸರಿಸಿ ಮಹಾನಗರಪಾಲಿಕೆ ಮತ್ತು ನಗರಸಭೆಯಲ್ಲಿ ನೇರಪಾವತಿಯಡಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಮೂಲಕ ಕ್ರಮವಹಿಸಲು ಸೂಚಿಸಲಾಗಿರುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಕೆಳಕಂಡ ಪಟ್ಟಿಯಲ್ಲಿ ವಿವರಿಸಿರುವಂತೆ ತುಮಕೂರು ಮಹಾನಗರ ಪಾಲಿಕೆ, ಶಿರಾ ಮತ್ತು ತಿಪಟೂರು ನಗರಸಭೆಯಲ್ಲಿ ನೇರಪಾವತಿಯಡಿ ಖಾಲಿ ಇರುವ ಪೌರಕಾರ್ಮಿಕ ಹುದ್ದೆಗಳನ್ನು ಭರ್ತಿ ಮಾಡಲು, ಅರ್ಹ ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ನಮೂನೆಗಳನ್ನು ದಿನಾಂಕ 25- 03-902ರಿಂದ ದಿನಾಂಕ 08-04-2026ರ ವರೆಗೆ, ಸಂಬಂಧಪಟ್ಟ ಮಹಾನಗರ ಪಾಲಿಕೆ/ ನಗರಸಭೆ ಕಚೇರಿಗಳಿಂದ ಪಡೆದು ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು, ದಿನಾಂಕ 09-04-2026ರ ಸಂಜೆ 5.00 ಗಂಟೆಯೊಳಗೆ ಆಯಾ ಕಚೇರಿಗೆ ಸಲ್ಲಿಸತಕ್ಕದ್ದು.

ನಗರ ಸ್ಥಳೀಯ ಸಂಸ್ಥೆಯ ಹೆಸರು

  • ತುಮಕೂರು ಮಹಾನಗರ ಪಾಲಿಕೆ 175 ಹುದ್ದೆ
  • ತಿಪಟೂರು ನಗರಸಭೆ 24 ಹುದ್ದೆ
  • ಶಿರಾ ನಗರಸಭೆ 39 ಹುದ್ದೆ

ವಿಶೇಷ ಸೂಚನೆಗಳು

* ಅಧಿಸೂಚನೆಯನ್ನು ಜಿಲ್ಲಾ ನಗರಾಭಿವೃದ್ಧಿ ಕೋಶದ ವೆಬ್‌ಸೈಟ್ www.tumakurududc.mrc.gov.in ನಲ್ಲಿ ಹಾಗೂ ಆಯಾ ಕಚೇರಿಗಳ ಸೂಚನಾ ಫಲಕದಲ್ಲಿ ವೀಕ್ಷಿಸಬಹದು.

* ಈ ನೇಮಕಾತಿಯು ಸರ್ಕಾರ/ ಪೌರಾಡಳಿತ ನಿರ್ದೇಶನಾಲಯದಿಂದ ಕಾಲಕಾಲಕ್ಕೆ ಹೊರಡಿಸಲಾಗುವ ಆದೇಶ ಮತ್ತು ಸುತ್ತೋಲೆಗಳ ಪರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular