HomeKarnatakaಚಂದ್ರಗ್ರಹಣ ಎಫೆಕ್ಟ್ : ಮಂತ್ರಾಲಯದಲ್ಲಿ ಇಂದು 12 ಗಂಟೆ ಬಳಿಕ ಪೂಜೆ-ಪುರಸ್ಕಾರ ಬಂದ್

ಚಂದ್ರಗ್ರಹಣ ಎಫೆಕ್ಟ್ : ಮಂತ್ರಾಲಯದಲ್ಲಿ ಇಂದು 12 ಗಂಟೆ ಬಳಿಕ ಪೂಜೆ-ಪುರಸ್ಕಾರ ಬಂದ್

ರಾಯಚೂರು : ಇಂದು ಚಂದ್ರಗ್ರಹಣ ಹಿನ್ನೆಲೆಯಲ್ಲಿ ಮಂತ್ರಾಲಯದಲ್ಲಿ ಮದ್ಯಾಹ್ನ 12 ಗಂಟೆ ಬಳಿಕ ಪೂಜೆ ಪುರಸ್ಕಾರಗಳು ಬಂದ್ ಆಗಲಿವೆ. ಆದರೆ ರಾಯರ ದರ್ಶನಕ್ಕೆ ಭಕ್ತರಿಗೆ ಎಂದಿನಂತೆ ಅವಕಾಶ ಇರಲಿದೆ.

ಇಂದು ಸಂಜೆ ವೇಳೆ ನಡೆಯಬೇಕಿದ್ದ ಮಹಾ ಮಂಗಳಾರತಿ ಹಾಗೂ ರಥೋತ್ಸವದ ಕಾರ್ಯಕ್ರಮಗಳು ಮದ್ಯಾಹ್ನದೊಳಗೆ ಪೂರ್ಣಗೊಳ್ಳಲಿವೆ. ಭಕ್ತರ ವಿಶೇಷ ಸೇವಾ ಕಾರ್ಯಗಳು ಬಂದ್ ಆಗಲಿವೆ. ಆದರೆ ರಾಯರ ದರ್ಶನಕ್ಕೆ ಎಂದಿನಂತೆ ಅವಕಾಶ ನೀಡಲಾಗುತ್ತದೆ. ಚಂದ್ರಗ್ರಹಣ ಹಿನ್ನೆಲೆ ಅನ್ನಪ್ರಸಾದವೂ ಇಂದು ಇರುವುದಿಲ್ಲ ಎಂದು ಪ್ರಕಟಣೆ ಹೊರಡಿಸಿದೆ.

ಇಂದು ಈ ವರ್ಷದ ಕೊನೇ ಚಂದ್ರಗ್ರಹಣ ಹಿನ್ನೆಲೆಯಲ್ಲಿ ರಾಜ್ಯದ ಹಲವು ದೇವಾಲಯಗಳು ಬಂದ್ ಆಗಲಿವೆ. ಬೆಂಗಳೂರಿನ ಪ್ರಮುಖ ದೇವಾಲಯಗಳಾದ ಗವಿ ಗಂಗಾಧರೇಶ್ವರ, ಬನಶಂಕರಿ ದೇವಿ ದೇವಸ್ಥಾ ಸೇರಿದಂತೆ ಹಲವು ದೇವಾಲಯಗಳು ಸೇರಿ ಹಲವು ದೇವಾಲಯಗಳು ಮಧ್ಯಾಹ್ನದ ಬಳಿಕ ಬಾಗಿಲು ಮುಚ್ಚಲಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular