ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ದಾಳಿಂಬೆ ಹಣ್ಣು….!

ದಾಳಿಂಬೆ ಹಣ್ಣಿನ ಉಪಯೋಗಗಳು ಹಲವು. ಆರೋಗ್ಯದೊಂದಿಗೆ ಇದು ಚರ್ಮಕ್ಕೂ ಹೊಳಪು ನೀಡುತ್ತದೆ. ದಾಳಿಂಬೆ ಹಣ್ಣು ಕಡಿಮೆ ಕ್ಯಾಲೋರಿ ಹೊಂದಿವೆ ಹಾಗೂ ದೇಹದ ತೂಕವನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ಇರುವ ಕೆಟ್ಟ ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ.

ರಕ್ತನಾಳಗಳ ಒಳ ಪದರವನ್ನು ಬಲಪಡಿಸುತ್ತದೆ. ದೇಹದ ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ. ಗರ್ಭಿಣಿಯರು ದಿನ ಒಂದು ಲೋಟ ದಾಳಿಂಬೆ ರಸವನ್ನು ಕುಡಿಯುವುದರಿಂದ ನಿಶ್ಯಕ್ತಿ ದೂರವಾಗುತ್ತದೆ.

ದಾಳಿಂಬೆ ಬೀಜದ ರಸವನ್ನು ಮುಖಕ್ಕೆ ಹಚ್ಚುವುದರಿಂದ ನಿಮ್ಮ ಮುಖ ಹಾಗೂ ಮೈ ಬಣ್ಣ ಕಾಂತಿಯುತವಾಗುತ್ತದೆ. ಈ ದಾಳಿಂಬೆ ಬೀಜಗಳು ಅಥವಾ ದಾಳಿಂಬೆ ರಸ ಮೊಡವೆ, ಗುಳ್ಳೆಗಳನ್ನು ಗುಣಪಡಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read