HomeKarnatakaBIG NEWS: ವರ್ಗಾವಣೆ ಸಿಗದೇ ನೊಂದ ಪೊಲೀಸ್ ಸಿಬ್ಬಂದಿ; ದಯಾಮರಣ ನೀಡುವಂತೆ ರಾಷ್ಟ್ರಪತಿ, ಸಿಎಂಗೆ ಪತ್ರ...

BIG NEWS: ವರ್ಗಾವಣೆ ಸಿಗದೇ ನೊಂದ ಪೊಲೀಸ್ ಸಿಬ್ಬಂದಿ; ದಯಾಮರಣ ನೀಡುವಂತೆ ರಾಷ್ಟ್ರಪತಿ, ಸಿಎಂಗೆ ಪತ್ರ ಬರೆದು ಮನವಿ

ಬೆಂಗಳೂರು: ಪೊಲೀಸ್ ಸಿಬ್ಬಂದಿಗಳೇ ದಯಾಮರಣಕ್ಕೆ ಪತ್ರ ಬರೆದಿರುವ ಘಟನೆ ಬೆಳಕಿಗೆ ಬಂದಿದೆ. ವರ್ಗಾವಣೆ ಸಿಗದೇ ನೊಂದ ರಾಜ್ಯದ ಹಲವು ಭಾಗಗಳ ಪೊಲೀಸ್ ಸಿಬ್ಬಂದಿ ನಮಗೆ ವರ್ಗಾವಣೆ ನೀಡಿ ಇಲ್ಲವೇ ದಯಾಮರಣ ಕೊಡಿ ಎಂದು ರಾಷ್ಟ್ರಪತಿಗಳಿಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ.

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಳೆದ ಮೂರು ವರ್ಷಗಳಿಂದ ಪತಿ-ಪತ್ನಿ ಯಾವುದೇ ಅಂತರ್ ಜಿಲ್ಲಾ ವರ್ಗಾವಣೆಯಾಗಿಲ್ಲ. ಇದರಿಂದ ಸಮಸ್ಯೆಯಾಗುತ್ತಿದೆ. ಹೆಂಡತಿ ಒಂದು ಜಿಲ್ಲೆಯಲ್ಲಿ, ಗಂಡ ಒಂದು ಜಿಲ್ಲೆಯಲ್ಲಿ ವಾಸವಾಗುವಂತಾಗಿದೆ. ಕುಟುಂಬದ ಜೊತೆ ಕಾಲ ಕಳೆಯಲು ಆಗುತ್ತಿಲ್ಲ. ಇದರಿಂದ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿವೆ. ನಮಗೆ ವರ್ಗಾವಣೆ ಮಾಡಿ ಇಲ್ಲವೇ ದಯಾಮರಣ ನೀಡಿ ಎಂದು ಕೋರಿ ಪತ್ರ ಬರೆದಿದ್ದಾರೆ.

ರಾಜ್ಯದ ವಿವಿಧ ಠಾಣೆಗಳಲ್ಲಿರುವ ಸಿಬ್ಬಂದಿಗಳು ದಯಾಮರಣಕ್ಕಾಗಿ ಮೊರೆ ಇಟ್ಟಿದ್ದಾರೆ. ವರ್ಗಾವಣೆ ಸಿಗದ ಕಾರಣ ಪೊಲೀಸ್ ಸಿಬ್ಬಂದಿಗಳು ಕುಟುಂಬದ ಜೊತೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಕೆಲ ಸಿಬ್ಬಂದಿಗಳಿಗೆ ವಯಸ್ಸಾದ ತಂದೆ-ತಾಯಿ ನೋಡಿಕೊಳ್ಳಬೇಕಿದೆ. ಸಿಎಂ ಹಾಗೂ ಗೃಹ ಸಚಿವರು ವರ್ಗಾವಣೆ ಬಗ್ಗೆ ಬಾಯಿ ಮಾತಿಗೆ ಹೇಳುತ್ತಿದ್ದಾರೆ. ಆದರೆ ಹಲವು ವರ್ಷಗಳಿಂದ ಯಾವುದೇ ವರ್ಗಾವಣೆ ಸಿಗದೇ ಬೇಸತ್ತಿದ್ದೇವೆ. ಹಾಗಾಗಿ ನಮಗೆ ವರ್ಗಾವಣೆ ನೀಡಿ ಇಲ್ಲವೇ ದಯಾಮರಣ ನೀಡಿ ಎಂದು ಪತ್ರದ ಮೂಲಕ ಕೋರಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular