HomeIndiaBIG NEWS: ದಶಾಶ್ವಮೇಧ ಘಾಟ್ ನಲ್ಲಿ ಗಂಗಾಸ್ನಾನ, ಗಂಗಾರತಿ ನೆರವೇರಿಸಿದ ಪ್ರಧಾನಿ ಮೋದಿ

BIG NEWS: ದಶಾಶ್ವಮೇಧ ಘಾಟ್ ನಲ್ಲಿ ಗಂಗಾಸ್ನಾನ, ಗಂಗಾರತಿ ನೆರವೇರಿಸಿದ ಪ್ರಧಾನಿ ಮೋದಿ

ವಾರಾಣಸಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಾರಾಣಾಸಿ ಕ್ಷೇತ್ರದಿಂದ 3ನೇ ಅವಧಿಗೆ ನಾಮಪತ್ರ ಸಲ್ಲಿಸುತ್ತಿದ್ದು, ನಾಮಪತ್ರ ಸಲ್ಲಿಕೆಗೆ ಒಂದು ದಿನ ಮೊದಲು ವಾರಾಣಾಸಿ ಕ್ಷೇತ್ರದಲ್ಲಿ ನಿನ್ನೆ ಭರ್ಜರಿ ರೋಡ್ ಶೋ ನಡೆಸಿದರು. ಬಳಿಕ ಕಾಶಿ ವಿಶ್ವನಾಥ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಇಂದು ಪ್ರಧಾನಿ ಮೋದಿ ವಾರಾಣಸಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದು, ನಾಮಪತ್ರ ಸಲ್ಲಿಕೆಗೂ ಮುನ್ನ ಕಾಶಿಯ ದಶಾಶ್ವಮೇಧ ಘಾಟ್ ನಲ್ಲಿ ಗಂಗಾ ಸ್ನಾನ ಮಾಡಿದರು. ಬಳಿಕ ಪುರೋಹಿತರ ಸಾನ್ನಿಧ್ಯದಲ್ಲಿ ವೇದಘೋಷ, ಮಂತ್ರಪಠಣಗಳೊಂದಿಗೆ ಗಂಗಾ ಪೂಜೆ, ಗಂಗಾರತಿ ನೆರವೇರಿಸಿದರು.

ಬಳಿಕ ಕಾಲ ಭೈರವೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಲಿರುವ ಪ್ರಧಾನಿ ಮೋದಿ ಬಳಿಕ ಮಧ್ಯಾಹ್ನ 11:45ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular