HomeLatest NewsBIG NEWS: ದೇಶ ಮುನ್ನಡೆಸಲು ವಿಫಲರಾಗಿ, ಈಗ ನಾಗರಿಕರಿಗೆ ತ್ಯಾಗ ಮಾಡಲು ಕೇಳುತ್ತಿದ್ದಾರೆ: ಪ್ರಧಾನಿ ಮೋದಿ...

BIG NEWS: ದೇಶ ಮುನ್ನಡೆಸಲು ವಿಫಲರಾಗಿ, ಈಗ ನಾಗರಿಕರಿಗೆ ತ್ಯಾಗ ಮಾಡಲು ಕೇಳುತ್ತಿದ್ದಾರೆ: ಪ್ರಧಾನಿ ಮೋದಿ ವಿರುದ್ಧ ನಟ ಪ್ರಕಾಶ್ ರಾಜ್ ವಾಗ್ದಾಳಿ

ಬೆಂಗಳೂರು: ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ತಲೆದೋರಿರುವ ಯುದ್ಧದ ಬಿಕ್ಕಟ್ಟಿನ ನಡುವೆಯೇ ಪ್ರಧಾಅನಿ ನರೇಂದ್ರ ಮೋದಿ ಪೆಟ್ರೋಲ್ ಡೀಸೆಲ್, ರಸಗೊಬ್ಬರ, ಖಾದ್ಯ ತೈಲ ಕಡಿಮೆ ಬಳಸುವಂತೆ ಹಾಗೂ ವರ್ಕ್ ಫ್ರಂ ಹೋಂ ಗೆ ಆದ್ಯತೆ ನೀಡಲು ದೇಶದ ಜನತೆಗೆ ಕರೆ ನೀಡಿರುವ ಬೆನ್ನಲ್ಲೇ ಭಾರಿ ಚರ್ಚೆಗಳು ನಡೆಯುತ್ತಿವೆ. ಪ್ರಧಾನಿ ಮೋದಿ ಅವರ ಈ ಸಂದೇಶಕ್ಕೆ ವಿಪಕ್ಷಗಳ ನಾಯಕರು ಇದು ಆಡಳಿತದ ವೈಫಲ್ಯದ ಪುರಾವೆ ಎಂದು ಟಿಕಿಸಿದ್ದಾರೆ. ಮತ್ತೊಂದೆಡೆ ಚುನಾವಣೆಗಳು ಮುಗಿದ ಬಳಿಕ ಪ್ರಧಾಅನಿ ಮೋದಿಯವರಿಗೆ ಬಿಕ್ಕಟ್ಟಿನ ನೆನಪಾಯಿತು ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ನಡುವೆ ಬಹುಭಾಷಾ ನಟ, ನಿರ್ದೇಶಕ ಪ್ರಕಾಶ್ ರಾಜ್ ಕೂಡ ಪ್ರಧಾನಿ ಮೋದಿಯವರ ಹೇಳಿಕೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಪ್ರಧಾನಿ ಮೋದಿ ಹವಾಯಿ ಚಪ್ಪಲಿ ಹಾಕುವವರೂ ವಿಮಾನದಲ್ಲಿ ಓಡಾಡುವಂತೆ ಮಾಡುವುದಾಗಿ ಭರವಸೆಗಳನ್ನು ನೀಡಿದ್ದರು. ಆದರೆ ಈಗ ದೇಶ ಮುನ್ನಡೆಸಲಾಗದೇ ದೇಶದ ನಾಗರಿಕರಿಗೆ ತಾಗ್ಯ ಮಾಡುವಂತೆ ಕರೆ ನೀಡುತ್ತಿದ್ದಾರೆ ಎಂದು ಕುಟುಕಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಧಾನಿ ಮೋದಿ ದೇಶ ಮುನ್ನಡೆಸಲು ವಿಫಲರಾಗಿದ್ದಾರೆ. ನೋಟು ಅಮಾನ್ಯೀಕರಣದಿಂದಾಅಗಿ ಆರ್ಥಿಕತೆಯನ್ನು ನಾಶಪಡಿಸಲಾಯಿತು. ಜನರಿಗೆ ಪಾತ್ರೆಗಳನ್ನು ಬಡಿಯಲು ಹಾಗೂ ಗೋ ಕರೋನಾ ಗೋ ಎಂದು ಘೋಷಣೆ ಕೂಗಲು ಹೇಳಲಾಯಿತು. 2 ಕೋಟಿ ಉದ್ಯೋಗಗಳು, 100 ಸ್ಮಾರ್ಟ್ ಸಿಟಿ ನಿರ್ಮಾಣ, ಖಾತೆಗಳಿಗೆ 15 ಲಕ್ಷ ರೂಪಾಯಿಗಳಂತಹ ಸುಳ್ಲು ಭರವಸೆಗಳನ್ನು ನೀಡಲಾಯಿತು. ಎಂಎಸ್ ಪಿ ವಿಷಯದಲ್ಲಿ ರೈತರಿಗೆ ವಂಚಿಸಲಾಯಿತು.

ಶ್ರೀಮಂತ ಸ್ನೇಹಿತರಿಗೆ ತೆರಿಗೆ ಮನ್ನಾ ಮಾಡುತ್ತಾ ಸಾಮಾನ್ಯ ಜನರಿಂದ ಗಬ್ಬರ್ ಸಿಂಗ್ ಟ್ಯಾಕ್ಸ್ ವಸೂಲಿ ಮಾಡಿದರು. ಈಗ ದೇಶವನ್ನು ಮುನ್ನಡೆಸಲು ತಾನು ಸಂಪೂರ್ಣವಾಗಿ ವಿಫಲವಾಗಿರುವುದರಿಂದ ನಾಗರಿಕರನ್ನು ತ್ಯಾಗ ಮಾಡುವಂತೆ ಕೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular