ಸ್ಪೀಕರ್ ಚಹಾ ಕೂಟದಲ್ಲಿ ಪ್ರಧಾನಿ ಮೋದಿ, ರಾಹುಲ್ ಗಾಂಧಿ ಭಾಗಿ: ಫೋಟೋ ವೈರಲ್

ನವದೆಹಲಿ: ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಶುಕ್ರವಾರ ಆಯೋಜಿಸಿದ್ದ ಅನೌಪಚಾರಿಕ ಚಹಾ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾಗಿಯಾಗಿದ್ದಾರೆ.

ಉಭಯ ನಾಯಕರು ಸ್ನೇಹಭಾವ ತೋರಿ ಪರಸ್ಪರ ಆತ್ಮೀಯವಾಗಿ ಶುಭಾಶಯ ಕೋರಿದ್ದಾರೆ. ಮಾನ್ಸೂನ್ ಅಧಿವೇಶನದ ನಿಗದಿತ ಅಂತ್ಯಕ್ಕೆ ಕೇವಲ ಒಂದು ಮೊದಲು ಕೆಳಮನೆ ಕಲಾಪ ಮುಂದೂಡಿದ ಸ್ವಲ್ಪ ಸಮಯದ ನಂತರ ಈ ಸಭೆ ನಡೆಯಿತು.

ಆರಂಭದಲ್ಲಿ ಆಗಸ್ಟ್ 12 ರಂದು ಮುಕ್ತಾಯಗೊಳ್ಳಬೇಕಿದ್ದ ಅಧಿವೇಶನವನ್ನು ಸ್ಪೀಕರ್ ಬಿರ್ಲಾ ಅವರು ಮುಂದೂಡುವುದಾಗಿ ಘೋಷಿಸಿದರು.

ಸಂಸತ್ತಿನ ಸಂಕೀರ್ಣದೊಳಗೆ ನಡೆದ ಚಹಾ ಸಭೆಯಲ್ಲಿ, ಪ್ರಧಾನಿ ಮೋದಿ ಅವರು ಸ್ಪೀಕರ್ ಓಂ ಬಿರ್ಲಾ ಅವರೊಂದಿಗೆ ಸೋಫಾದಲ್ಲಿ ಕುಳಿತಿದ್ದು, ರಾಹುಲ್ ಗಾಂಧಿ ಅವರು ಮೋದಿ ಅವರ ಬಲಕ್ಕೆ ಕುರ್ಚಿಯ ಮೇಲೆ ಕುಳಿತಿದ್ದಾರೆ.

ಸಭೆಯಲ್ಲಿ ಸರ್ಕಾರ ಮತ್ತು ವಿರೋಧ ಪಕ್ಷದ ಹಲವಾರು ನಾಯಕರು ಕೂಡ ಉಪಸ್ಥಿತರಿದ್ದರು. ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಕಿರಣ್ ರಿಜಿಜು, ಪಿಯೂಷ್ ಗೋಯಲ್ ಮತ್ತು ಚಿರಾಗ್ ಪಾಸ್ವಾನ್, ಸುದೀಪ್ ಬಂಡೋಪಾಧ್ಯಾಯ, ಕನಿಮೋಳಿ ಸೇರಿದಂತೆ ವಿರೋಧ ಪಕ್ಷದ ಸಂಸದರು ಭಾಗವಹಿಸಿದ್ದರು. ಈ ಚಹಾ ಕೂಟದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

https://twitter.com/LokSabhaSectt/status/1821891465142014153

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read