HomeLatest NewsSHOCKING : ಫುಟ್ಬಾಲ್ ಪಂದ್ಯದ ವೇಳೆ ಸಿಡಿಲು ಬಡಿದು ಆಟಗಾರ ಸಾವು ; ಆಘಾತಕಾರಿ ವೀಡಿಯೋ...

SHOCKING : ಫುಟ್ಬಾಲ್ ಪಂದ್ಯದ ವೇಳೆ ಸಿಡಿಲು ಬಡಿದು ಆಟಗಾರ ಸಾವು ; ಆಘಾತಕಾರಿ ವೀಡಿಯೋ ವೈರಲ್ |WATCH VIDEO

ಥಾಯ್ಲೆಂಡ್‌ನ ಸುಂಗೈ ಗೊಲೋಕ್‌ನ ಶಾಂತಿಪಾಪ್ ಸ್ಟೇಡಿಯಂನಲ್ಲಿ ನಡೆದ ಸ್ಥಳೀಯ ‘ಗೊಲೋಕ್ ಎಫ್‌ಎ ಕಪ್’ ಟೂರ್ನಿಯ ಫುಟ್‌ಬಾಲ್ ಪಂದ್ಯದಲ್ಲಿ ಭೀಕರ ದುರಂತ ಸಂಭವಿಸಿದೆ. ಸ್ಯಾಮ್ ಕೋಲ್ಟ್ಸ್ ಮತ್ತು ಅಬು x ನಾಂಗ್ ಸಿರಿನ್ ತಂಡಗಳ ನಡುವಿನ ಪಂದ್ಯ ನಡೆಯುತ್ತಿದ್ದ ವೇಳೆ ಏಕಾಏಕಿ ಮೈದಾನಕ್ಕೆ ಸಿಡಿಲು ಬಡಿದಿದೆ.

ಈ ದುರ್ಘಟನೆಯಲ್ಲಿ ಸ್ಯಾಮ್ ಕೋಲ್ಟ್ಸ್ ತಂಡದ 24 ವರ್ಷದ ಯುವ ಫುಟ್ಬಾಲ್ ಆಟಗಾರ ಸೊಫ್ವಾನ್ ಅವಾಯೆ ಮೃತಪಟ್ಟಿದ್ದು, ಇನ್ನೂ 12 ಮಂದಿ ಆಟಗಾರರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪಂದ್ಯ ನಡೆಯುತ್ತಿದ್ದ ವೇಳೆ ಭಾರೀ ಸದ್ದಿನೊಂದಿಗೆ ಸಿಡಿಲು ಬಡಿದ ಪರಿಣಾಮ ಮೈದಾನದಲ್ಲಿದ್ದ ಆಟಗಾರರು ಮತ್ತು ಪ್ರೇಕ್ಷಕರು ಆತಂಕಕ್ಕೊಳಗಾದರು. ಸಿಡಿಲಿನ ಹೊಡೆತಕ್ಕೆ ತೀವ್ರವಾಗಿ ಗಾಯಗೊಂಡ ಅವಾಯೆ ಮೈದಾನದಲ್ಲೇ ಕುಸಿದು ಬಿದ್ದರು. ಕೂಡಲೇ ಅವರ ಸಹ ಆಟಗಾರರು ಓಡಿ ಬಂದು ಸಿಪಿಆರ್ (CPR) ನೀಡಿ ಪ್ರಾಣ ಉಳಿಸಲು ಪ್ರಯತ್ನಿಸಿದರು. ನಂತರ ತುರ್ತು ವೈದ್ಯಕೀಯ ಸಿಬ್ಬಂದಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗಾಯಗೊಂಡ 12 ಮಂದಿಯಲ್ಲಿ ಒಬ್ಬ ಮಲೇಷ್ಯಾ ಆಟಗಾರನೂ ಇದ್ದು, ಎಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಥುನ್ ಸಿರಿಖುಂಟ್ ತಿಳಿಸಿದ್ದಾರೆ.ಮೃತ ಆಟಗಾರ ಸೊಫ್ವಾನ್ ಅವಾಯೆ ಇತ್ತೀಚೆಗಷ್ಟೇ ಥಾಯ್ಲೆಂಡ್‌ನ ತೃತೀಯ ವಿಭಾಗದ ಕ್ಲಬ್ ಯಾಲಾ ಎಫ್‌ಸಿಗೆ ಸೇರ್ಪಡೆಯಾಗಿದ್ದರು. ಅವರ ಅಕಾಲಿಕ ನಿಧನಕ್ಕೆ ಯಾಲಾ ಎಫ್‌ಸಿ ಆಡಳಿತ ಮಂಡಳಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಕುಟುಂಬದವರಿಗೆ ಸಾಂತ್ವನ ತಿಳಿಸಿದೆ.

ಥಾಯ್ಲೆಂಡ್‌ನಲ್ಲಿ ಸಿಡಿಲು ಬಡಿದು ಸಂಭವಿಸುವ ಅಪಘಾತಗಳು ಹೊಸದೇನಲ್ಲ. ದೇಶದ ರೋಗ ನಿಯಂತ್ರಣ ಇಲಾಖೆ ವರದಿ ಪ್ರಕಾರ, 2020ರಿಂದ 2024ರ ಅವಧಿಯಲ್ಲಿ ದೇಶದಲ್ಲಿ ಸುಮಾರು 283 ಮಂದಿ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ ಅಥವಾ ಗಾಯಗೊಂಡಿದ್ದಾರೆ. ಇವರಲ್ಲಿ ಹೆಚ್ಚಿನವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದೇ ವರ್ಷದ ಮೇ ತಿಂಗಳಲ್ಲಿ ಲಾಂಪಾಂಗ್ ಮತ್ತು ಉಥಾಯ್ ಥಾನಿ ಪ್ರಾಂತ್ಯಗಳಲ್ಲಿ ನಡೆದ ಪ್ರತ್ಯೇಕ ಸಿಡಿಲು ಅವಘಡಗಳಲ್ಲಿ ಗರ್ಭಿಣಿ ಮಹಿಳೆ ಸೇರಿದಂತೆ ಮೂವರು ಮೃತಪಟ್ಟಿದ್ದರು. ಇದೇ ದಿನ ಭಾರತದಲ್ಲಿಯೂ ಜಾರ್ಖಂಡ್ ರಾಜ್ಯದಲ್ಲಿ ಸಿಡಿಲು ಬಡಿದು ಹೊಲದಲ್ಲಿ ಕೆಲಸ ಮಾಡುತ್ತಿದ್ದ 14 ಮಂದಿ ಕೃಷಿ ಕಾರ್ಮಿಕರು ಮೃತಪಟ್ಟಿರುವುದು ಗಮನಾರ್ಹವಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular