HomeRecipiesಸಂಜೆಯ ಚಹಾ ಜೊತೆಗೆ ತಿನ್ನಲು ಸಖತ್ ಮಜಾ ನೀಡುತ್ತೆ ಈ 'ಪಿನ್ ವೀಲ್ ಆಲೂ ಪರೋಟ'!

ಸಂಜೆಯ ಚಹಾ ಜೊತೆಗೆ ತಿನ್ನಲು ಸಖತ್ ಮಜಾ ನೀಡುತ್ತೆ ಈ ‘ಪಿನ್ ವೀಲ್ ಆಲೂ ಪರೋಟ’!

ಬೆಳಗಿನ ಉಪಹಾರಕ್ಕೆ ಆಲೂ ಪರೋಟ ಮಾಡುವುದು ಸಾಮಾನ್ಯ. ಆದರೆ ಸಂಜೆಯ ಟೀ ಸಮಯದಲ್ಲಿ ತಿನ್ನಲು ಏನಾದರೂ ಗರಿಗರಿಯಾದ ಮತ್ತು ರುಚಿಕರವಾದ ತಿಂಡಿ ಬೇಕೆನಿಸಿದರೆ ‘ಪಿನ್ ವೀಲ್ ಆಲೂ ಪರೋಟ’ ಅತ್ಯುತ್ತಮ ಆಯ್ಕೆ. ಮಕ್ಕಳಿಂದ ದೊಡ್ಡವರವರೆಗೆ ಎಲ್ಲರೂ ಇಷ್ಟಪಡುವ ಈ ಪುಟ್ಟ ಪರೋಟಗಳನ್ನು ಸುಲಭವಾಗಿ ಹೇಗೆ ಮಾಡಬಹುದು ಎಂಬ ಮಾಹಿತಿ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು

  • ಗೋಧಿ ಹಿಟ್ಟು – 1 ಕಪ್
  • ಬೇಯಿಸಿದ ಆಲೂಗಡ್ಡೆ – 2
  • ಸಣ್ಣಗೆ ಹೆಚ್ಚಿದ ಈರುಳ್ಳಿ – 1
  • ಹಸಿಮೆಣಸಿನಕಾಯಿ – 1
  • ಕೊತ್ತಂಬರಿ ಸೊಪ್ಪು – ಕಾಲು ಕಪ್
  • ಗರಂ ಮಸಾಲ – ಅರ್ಧ ಚಮಚ
  • ಕೆಂಪು ಮೆಣಸಿನ ಪುಡಿ – ಅರ್ಧ ಚಮಚ
  • ಧನಿಯಾ ಪುಡಿ – ಅರ್ಧ ಚಮಚ
  • ಜೀರಿಗೆ ಪುಡಿ – ಅರ್ಧ ಚಮಚ
  • ತುಪ್ಪ – ಹುರಿಯಲು
  • ಉಪ್ಪು – ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ ಮೊದಲು ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟನ್ನು ಹಾಕಿಕೊಂಡು, ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ಮೃದುವಾಗಿ ಕಲಸಿಕೊಳ್ಳಿ. ಈ ಹಿಟ್ಟನ್ನು ಸ್ವಲ್ಪ ಸಮಯ ಪಕ್ಕಕ್ಕೆ ಇಡಿ. ಈಗ ಮತ್ತೊಂದು ಪಾತ್ರೆಯಲ್ಲಿ ಬೇಯಿಸಿದ ಆಲೂಗಡ್ಡೆಯನ್ನು ಚೆನ್ನಾಗಿ ಸ್ಮ್ಯಾಶ್ ಮಾಡಿಕೊಳ್ಳಿ. ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಎಲ್ಲಾ ಮಸಾಲಾ ಪುಡಿಗಳನ್ನು ಹಾಗೂ ರುಚಿಗೆ ತಕ್ಕ ಉಪ್ಪು ಸೇರಿಸಿ ಹೂರಣ ಸಿದ್ಧಪಡಿಸಿಕೊಳ್ಳಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಂತರ ಕಲಸಿಟ್ಟ ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿಕೊಂಡು ತೆಳುವಾಗಿ ಲಟ್ಟಿಸಿ. ಈ ಪುಟ್ಟ ಪರೋಟದ ಮಧ್ಯಭಾಗದಲ್ಲಿ ಸಿದ್ಧಪಡಿಸಿದ ಆಲೂಗಡ್ಡೆ ಹೂರಣವನ್ನು ಇಟ್ಟು ಎಲ್ಲ ಕಡೆಯಿಂದಲೂ ಮುಚ್ಚಿ. ಇದನ್ನು ಮತ್ತೆ ಲಟ್ಟಿಸಿ ಚಿಕ್ಕ ಪರೋಟದ ಆಕಾರ ನೀಡಿ. ಒಲೆಯ ಮೇಲೆ ಹಂಚು ಕಾಯಲು ಇಟ್ಟು, ಅದಕ್ಕೆ ತುಪ್ಪ ಸವರಿ ಸಣ್ಣ ಅಥವಾ ಮಧ್ಯಮ ಉರಿಯಲ್ಲಿ ಪರೋಟವನ್ನು ಎರಡು ಬದಿ ಹೊಂಬಣ್ಣ ಬರುವವರೆಗೆ ಚೆನ್ನಾಗಿ ಬೇಯಿಸಿ.

ಬಿಸಿಬಿಸಿಯಾದ ಈ ಪಿನ್ ವೀಲ್ ಆಲೂ ಪರೋಟವನ್ನು ಮೊಸರು ಅಥವಾ ನಿಮ್ಮ ನೆಚ್ಚಿನ ಚಟ್ನಿಯೊಂದಿಗೆ ಸವಿಯಲು ನೀಡಿ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular