HomeKarnatakaBIG NEWS: ಪಿಹೆಚ್ ಡಿ ವಿದ್ಯಾರ್ಥಿನಿ ನಾಪತ್ತೆ ಪ್ರಕರಣ; ಸೂರತ್ಕಲ್ ಬಳಿ ವಿದ್ಯಾರ್ಥಿನಿ ಬೈಕ್ ಪತ್ತೆ

BIG NEWS: ಪಿಹೆಚ್ ಡಿ ವಿದ್ಯಾರ್ಥಿನಿ ನಾಪತ್ತೆ ಪ್ರಕರಣ; ಸೂರತ್ಕಲ್ ಬಳಿ ವಿದ್ಯಾರ್ಥಿನಿ ಬೈಕ್ ಪತ್ತೆ

ಮಂಗಳೂರು: ಪಿಹೆಚ್ ಡಿ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಬಳಿ ಆಕೆಯ ಬೈಕ್ ಪತ್ತೆಯಾಗಿದೆ.

ಸುರತ್ಕಲ್ ಬಳಿ ನಿಲ್ಲಿಸಿದ್ದ ಚೈತ್ರಾ ಹೆಬ್ಬಾರ್ ಳ ಬೈಕ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಫೆ.17ರಂದು ಬೆಳಿಗ್ಗೆ ಪಿಜಿಯಿಂದ ಬೈಕ್ ನಲ್ಲಿ ತೆರಳಿದ್ದ ಚೈತ್ರಾ ಬಳಿಕ ವಾಪಾಸ್ ಆಗಿರಲಿಲ್ಲ. ಪಂಪ್ ವೆಲ್ ಬಳಿ ಆಕೆಯ ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆಗಿತ್ತು. ಸೂರತ್ಕಲ್ ಬಳಿ ಎಟಿಎಂ ನಲ್ಲಿ ಹಣ ಡ್ರಾ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು.

ಈ ನಡುವೆ ಚೈತ್ರಾ ಬ್ಯಾಂಕ್ ಖಾತೆಯಲ್ಲಿ ಲಕ್ಷಾಂತರ ರೂಪಾಯಿ ಹಣವಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಚೈತ್ರಾ ಕೇರಳ ಅಥವಾ ಬೆಂಗಳೂರು ಕಡೆ ಇರುವ ಅನುಮನ ವ್ಯಕ್ತವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನೊಂದೆಡೆ ಶಾರೂಕ್ ಎಂಬಾತ ಕೂಡ ನಾಪತ್ತೆಯಾಗಿದ್ದು, ಆತನ ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆಗಿದ್ದು ಅನುಮಾನ ಇಮ್ಮಡಿಯಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular