HomeLatest Newsಪಿಜಿ ಸಿಇಟಿ: ಎಂಬಿಎ, ಎಂಸಿಎ ಇತರೆ ಕೋರ್ಸ್ ಸೀಟು ಹಂಚಿಕೆ ಆರಂಭ: ಇಚ್ಛೆ ದಾಖಲಿಸಲು ಅವಕಾಶ

ಪಿಜಿ ಸಿಇಟಿ: ಎಂಬಿಎ, ಎಂಸಿಎ ಇತರೆ ಕೋರ್ಸ್ ಸೀಟು ಹಂಚಿಕೆ ಆರಂಭ: ಇಚ್ಛೆ ದಾಖಲಿಸಲು ಅವಕಾಶ

ಬೆಂಗಳೂರು: MBA, MCA, ME, M.Tech, M.Arch ಕೋರ್ಸ್ ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ.

ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಲಿಂಕ್ ಬಿಡುಗಡೆ ಮಾಡಿದ್ದು, ಸೆ.28ರವರೆಗೆ ಅವಕಾಶ ಇರುತ್ತದೆ. ಸೆ.29ರಂದು ಅಣಕು ಫಲಿತಾಂಶ ಪ್ರಕಟ. ಇಚ್ಛೆ/ಆಯ್ಕೆಗಳನ್ನು ಮರುಕ್ರಮಗೊಳಿಸಲು ಅ.3ರವರೆಗೆ ಅವಕಾಶ ಇರುತ್ತದೆ. ಅ.3ರಂದು ಸಂಜೆ 5ಗಂಟೆಗೆ ತಾತ್ಕಾಲಿಕ ಫಲಿತಾಂಶ ಪ್ರಕಟ. ಅ.4ರಂದು ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ.

ಸೀಟು ಹಂಚಿಕೆಯಾದವರು ಪೋಷಕರ ಜತೆ ಚರ್ಚಿಸಿ, ಛಾಯ್ಸ್ ದಾಖಲಿಸಲು ಅ.7ರವರೆಗೆ ಅವಕಾಶ ಇರುತ್ತದೆ. ಛಾಯ್ಸ್-1, ಛಾಯ್ಸ್-2 ದಾಖಲಿಸಿದವರು ಶುಲ್ಕ ಕಟ್ಟಬೇಕು. ಛಾಯ್ಸ್-1 ದಾಖಲಿಸಿದವರು ಅ.9ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular