HomeKarnatakaBIG NEWS: ಪೆಟ್ರೋಲ್ ಖಾಲಿ ವದಂತಿ: ಬಂಕ್ ಗಳಿಗೆ ಮುಗಿ ಬಿದ್ದ ಜನರು

BIG NEWS: ಪೆಟ್ರೋಲ್ ಖಾಲಿ ವದಂತಿ: ಬಂಕ್ ಗಳಿಗೆ ಮುಗಿ ಬಿದ್ದ ಜನರು

ಚಾಮರಾಜನಗರ: ಇರಾನ್-ಇಸ್ರೇಲ್ ನಡುವಿನ ಸಂಘರ್ಷ ಮುಂದುವರೆದಿದ್ದು, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವ ಪರಿಣಾಮ ಪೆಟ್ರೋಲ್ ಡಿಸೆಲ್ ಅಭಾವದ ಸುದ್ದಿಯು ಹಬ್ಬುತ್ತಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಪೆಟ್ರೋಲ್ ಖಾಲಿಯಾಗುರುವ ವದಂತಿಯಿಂದಾಗಿ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದ್ದು, ಜಿಲ್ಲೆಯ ಜನರು, ವಾಹನ ಸವಾರರು ಪೆಟ್ರೋಲ್ ಬಮ್ಕ್ ಗಳಿಗೆ ಮುಗಿ ಬೀಲುತ್ತಿದ್ದಾರೆ.

ಚಾಮರಾಜನಗರದ ಕೊಳ್ಳೇಗಾಲ ಪಟ್ಟಣಗಳಲ್ಲಿ ಪೆಟ್ರೋಲ್ ಸಿಗುವುದಿಲ್ಲ ಎಂಬ ವದಂತಿ ಹಬ್ಬಿದ್ದು, ವಾಹನ ಸವಾರರು ಏಕಾಏಕಿ ಪೆಟ್ರೋಲ್ ಬಂಕ್‌ಗಳತ್ತ ಧಾವಿಸುತ್ತಿದ್ದು, ಪೆಟ್ರೋಲ್ ಬಂಕ್ ಗಳಲ್ಲಿ ವಾಹನ ಸವಾರರು ಸರತಿ ಸಾಲಿನಲ್ಲಿ ನಿಂತು ಪೆಟ್ರೋಲ್ ತುಂಬಿಸಿಕೊಳ್ಳುತ್ತಿದ್ದಾರೆ. ಜಿಲ್ಲೆಯ ಹಲವು ಬಂಕ್‌ಗಳಲ್ಲಿ ವಾಹನ ಸವಾರರ ಉದ್ದುದ್ದ ಸಾಲುಗಳು ಕಂಡುಬರುತ್ತಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗ್ಯಾಸ್ ಕೊರತೆಯಂತೆಯೇ ಪೆಟ್ರೋಲ್ ಹಾಗೂ ಡೀಸೆಲ್‌ಗೂ ಸಮಸ್ಯೆ ಉಂಟಾಗಬಹುದು ಎಂಬ ಭಯ ಜನರಲ್ಲಿ ಹೆಚ್ಚಾಗಿದ್ದು, ಮುಂಜಾಗ್ರತೆಯಾಗಿ ಹೆಚ್ಚಿನ ಪ್ರಮಾಣದಲ್ಲಿ ಇಂಧನ ಖರೀದಿಸಲು ಜನರು ಹರಸಾಹಸ ಪಡುತ್ತಿದ್ದಾರೆ. ಕೆಲವು ಕಡೆಗಳಲ್ಲಿ ವಾಹನಗಳ ದೀರ್ಘ ಸಾಲುಗಳು ಟ್ರಾಫಿಕ್ ಸಮಸ್ಯೆಯನ್ನೂ ಉಂಟುಮಾಡಿವೆ.

ಬಂಕ್ ಸಿಬ್ಬಂದಿ, ಪೆಟ್ರೋಲ್ ಹಾಗೂ ಡೀಸೆಲ್ ಸಾಕಷ್ಟು ಲಭ್ಯವಿದೆ, ಯಾವುದೇ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸುತ್ತಿದ್ದರೂ ಜನರು ಮಾತ್ರ ಖರೀದಿಗೆ ಧಾವಿಸುತ್ತಲೇ ಇದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular